alex Certify ಪದೇ ಪದೇ ಬೆರಳುಗಳಿಂದ ನೆಟ್ಟಿಗೆ ತೆಗೆಯುವ ಅಭ್ಯಾಸ ಅಪಾಯಕಾರಿ, ಯಾಕೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಬೆರಳುಗಳಿಂದ ನೆಟ್ಟಿಗೆ ತೆಗೆಯುವ ಅಭ್ಯಾಸ ಅಪಾಯಕಾರಿ, ಯಾಕೆ ಗೊತ್ತಾ…..?

ಆಗಾಗ ಬೆರಳುಗಳನ್ನು ಮಡಚಿ ಮಡಚಿ ನೆಟ್ಟಿಗೆ ತೆಗೆಯುವ ಅಭ್ಯಾಸ ಹಲವರಿಗೆ ಇರುತ್ತದೆ. ನೀವು ಕೂಡ ಇದೇ ರೀತಿ ಮಾಡುತ್ತಿದ್ರೆ ಅದು ಅನಾರೋಗ್ಯದ ಸಂಕೇತ ಎನ್ನುತ್ತಾರೆ ತಜ್ಞರು. ಈ ರೀತಿ ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಮೂಳೆ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ. ಈ ಅಭ್ಯಾಸ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

ಈ ರೀತಿ ನೆಟ್ಟಿಗೆ ತೆಗೆಯುವುದರಿಂದ ಆರ್ಥರೈಟಿಸ್‌ ಸಮಸ್ಯೆ ಹೆಚ್ಚಾಗುತ್ತದೆಯಂತೆ. ದೇಹದ ಕೀಲುಗಳಲ್ಲಿ ಒಂದು ರೀತಿಯ ದ್ರವವಿರುತ್ತದೆ. ನೀವು ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆದಾಗ ಕೀಲುಗಳ ನಡುವೆ ಇರುವ ಈ ದ್ರವದ ಅನಿಲವು ಬಿಡುಗಡೆಯಾಗುತ್ತದೆ. ಇದರಿಂದಾಗಿ ಅದರೊಳಗೆ ರೂಪುಗೊಂಡ ಗುಳ್ಳೆಗಳು ಸಹ ಸಿಡಿಯುತ್ತವೆ.

ಬೆರಳುಗಳನ್ನು ಮಡಚಿದಾಗ ಶಬ್ದ ಬರಲು ಇದೇ ಕಾರಣ. ನಿಮ್ಮ ಸಂಧಿಗಳು ಅನೇಕ ಬಾರಿ ಶಬ್ಧ ಮಾಡುತ್ತವೆ, ಅತ್ಯಂತ ವೇಗವಾಗಿ ನಡೆದಾಗ ಕೂಡ ಈ ರೀತಿ ಶಬ್ಧ ಬರಬಹುದು. ದೀರ್ಘಕಾಲದವರೆಗೆ ಈ ರೀತಿ ನೆಟ್ಟಿಗೆ ತೆಗೆಯುವುದರಿಂದ ಕೈಗಳ ಹಿಡಿತದ ಬಲದ ಮೇಲೆ ಪರಿಣಾಮ ಬೀರುತ್ತದೆ. ಕೈಗಳಲ್ಲಿ ಊತವೂ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಬೆರಳನ್ನು ಹೆಚ್ಚು ಸೆಟೆದುಕೊಳ್ಳಬಾರದು.

ಈ ರೀತಿ ಬೆರಳುಗಳಿಂದ ನೆಟ್ಟಿಗೆ ತೆಗೆದಾಗ ನಿಮಗೆ ನೋವಾಗದೇ ಇದ್ದರೆ ಹೆಚ್ಚು ಸಮಸ್ಯೆಯಿಲ್ಲ. ಆದ್ರೆ ಹಲವು ಬಾರಿ ಈ ರೀತಿ ಮಾಡುತ್ತಲೇ ಇದ್ದರೆ ನಿಮಗೆ ಸಂಧಿವಾತ ಶುರುವಾಗಬಹುದು ಅಂತಾ ತಜ್ಞರು ಎಚ್ಚರಿಸಿದ್ದಾರೆ. ಹಾಗಾಗಿ ಆದಷ್ಟು ಬೇಗ ಈ ಅಭ್ಯಾಸವನ್ನು ಬಿಟ್ಟುಬಿಡುವುದು ಒಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...