alex Certify ಪತ್ನಿ ಖುಷಿಗೊಳಿಸಲು ಇಲ್ಲೊಬ್ಬ ಪತಿ ಮಾಡಿದ ಕೆಲಸ ನೋಡಿದ್ರೆ ನೀವು ಬೆರಗಾಗ್ತೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಖುಷಿಗೊಳಿಸಲು ಇಲ್ಲೊಬ್ಬ ಪತಿ ಮಾಡಿದ ಕೆಲಸ ನೋಡಿದ್ರೆ ನೀವು ಬೆರಗಾಗ್ತೀರಾ….!

ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಯಾವಾಗ ಯಾರಿಗಾದ್ರೂ ಪ್ರೀತಿ ಹುಟ್ಟಬಹುದು. ಜೊತೆಗೆ ಎಷ್ಟೇ ವಯಸ್ಸಾದರೂ ತಮ್ಮ ನೆಚ್ಚಿನವರ ಮೇಲೆ ಪ್ರೀತಿ ಕಡಿಮೆಯಾಗೋದಿಲ್ಲ. ಇದಕ್ಕೆ ಅನೇಕ ನಿದರ್ಶನಗಳು ಕೂಡ ಇವೆ. ಇದೀಗ ಮತ್ತೊಂದು ನಿದರ್ಶನ ಎನ್ನುವಂತೆ ಇಲ್ಲೊಬ್ಬ ವಯಸ್ಸಾದ ವೃದ್ಧರು ತನ್ನ ಪತ್ನಿ ಇಂಪ್ರೆಸ್ ಮಾಡಲು ಡಾನ್ಸ್ ಮಾಡಿದ್ದಾರೆ.

ಹೌದು, ಈ ಘಟನೆ ಎಲ್ಲಿ ನಡೆದಿರೋದು ಅನ್ನೋದರ ಬಗ್ಗೆ ಮಾಹಿತಿ ಇಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಮಾತ್ರ ಸಕ್ಕತ್ ವೈರಲ್ ಆಗ್ತಾ ಇದೆ. 70 ವರ್ಷದ ವೃದ್ಧ ಲುಂಗಿ ಬನಿಯನ್ ಧರಿಸಿ ಕುಣಿದಿದ್ದಾರೆ. ಪತ್ನಿಯನ್ನು ಚೇರ್ ಮೇಲೆ ಕೂರಿಸಿ ಅವರ ಸುತ್ತ ಸುತ್ತುವ ಮೂಲಕ ಅವರಿಗೆ ಖುಷಿ ನೀಡಿದ್ದಾರೆ. ಕಾಲಿವುಡ್ ನಟ ದಳಪತಿ ವಿಜಯ್ ಅಭಿನಯದ ʼದಿ ಬೀಸ್ಟ್ʼ ಸಿನಿಮಾದ ಅರೇಬಿಕ್ ಕುಥಿ ಹಾಡಿಗೆ ಡಾನ್ಸ್ ಮಾಡಿದ್ದಾರೆ.

ಈ ವೀಡಿಯೋವನ್ನು ಈ ದಂಪತಿ ಪುತ್ರಿ ಶೃತಿ ವಾಸುದೇವನ್ ಅವರು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಇವರ ಅನುಮತಿ ಮೇರೆಗೆ ಬೇರೊಬ್ಬರು ಈ ವಿಡಿಯೋ ಇನ್ ಸ್ಟಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇನ್ನು ಈ ವಿಡಿಯೋವನ್ನು ಇಲ್ಲಿಯವರೆಗೂ ಸುಮಾರು 11 ದಶಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ನೆಟ್ಟಿಗರು ಇದಕ್ಕೆ ಕಮೆಂಟ್ ಕೂಡ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...