alex Certify ಪತ್ನಿಯ ಕೊಲೆ ಆರೋಪದಡಿಯಲ್ಲಿ ಜಾಮೀನು ಅರ್ಜಿ ಸಲ್ಲಿಸಿದನಿಗೆ ಛಾಟಿ ಬೀಸಿದ ಸುಪ್ರೀಂ ಕೋರ್ಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಕೊಲೆ ಆರೋಪದಡಿಯಲ್ಲಿ ಜಾಮೀನು ಅರ್ಜಿ ಸಲ್ಲಿಸಿದನಿಗೆ ಛಾಟಿ ಬೀಸಿದ ಸುಪ್ರೀಂ ಕೋರ್ಟ್​

ವರದಕ್ಷಿಣೆ ಕಿರುಕುಳ ಹಾಗೂ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಜೈಲುಪಾಲಾಗಿರುವ ವ್ಯಕ್ತಿಯೊಬ್ಬ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ತಿರಸ್ಕರಿಸಿದೆ.

ಜಾಮೀನು ಅರ್ಜಿಗಾಗಿ ಆರೋಪಿ ಪರವಾಗಿ ವಾದ ಮಂಡಿಸಿದ ವಕೀಲರು ಈ ವ್ಯಕ್ತಿಯು ಇಂತಹ ಯಾವುದೇ ಪೂರ್ವಾಪರ ಆರೋಪಗಳನ್ನು ಮಾಡಿಲ್ಲ ಎಂದು ವಾದಿಸಿದರು. ಇದಕ್ಕೆ ಮರುಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್​., ನಿಮ್ಮ ಮಾತಿನ ಅರ್ಥವೇನು..? ಪೂರ್ವಾಪರ ಅಂದರೇನು..? ಆರೋಪಿಯು ಪ್ರತಿ ವರ್ಷ ಯಾರನ್ನಾದರೂ ಮದುವೆಯಾಗಿ ಬಳಿಕ ಅವರನ್ನು ಕೊಲ್ಲುವುದನ್ನು ಪೂರ್ವಾಪರ ಎನ್ನುತ್ತೀರಾ ಎಂದು ಟಾಂಗ್​ ನೀಡಿದೆ.

ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್​ ಪ್ರಕರಣ ಸಂಬಂಧ ವಿಚಾರಣೆ ಆರಂಭಿಸುವಂತೆ ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...