alex Certify ಪತಿ ವಿಕ್ಕಿ ಕೌಶಲ್‌ ಜೊತೆ ಜಗಳ ಮಾಡ್ತಾರಂತೆ ನಟಿ ಕತ್ರೀನಾ, ಕಾರಣ ಏನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ವಿಕ್ಕಿ ಕೌಶಲ್‌ ಜೊತೆ ಜಗಳ ಮಾಡ್ತಾರಂತೆ ನಟಿ ಕತ್ರೀನಾ, ಕಾರಣ ಏನು ಗೊತ್ತಾ….?

ಸೆಲೆಬ್ರಿಟಿಗಳು, ಸ್ಟಾರ್‌ ನಟ ನಟಿಯರ ವೈವಾಹಿಕ ಬದುಕು ಒಂದಿಲ್ಲ ಒಂದು ಕಾರಣಕ್ಕೆ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ಬಾಲಿವುಡ್‌ನ ಸ್ಟಾರ್‌ ಕಪಲ್‌ ವಿಕ್ಕಿ ಕೌಶಲ್‌ ಹಾಗೂ ಕತ್ರೀನಾ ಕೈಫ್‌ ದಂಪತಿ ಬಗ್ಗೆ ಸಿನಿ ದುನಿಯಾದಲ್ಲಿ ಗಾಸಿಪ್‌ ಶುರುವಾಗಿದೆ.

ಇವರಿಬ್ಬರ ದಾಂಪತ್ಯ ಹೇಗಿದೆ ಅನ್ನೋ ರಹಸ್ಯ ಕರಣ್‌ ಜೋಹರ್‌ ನಡೆಸಿಕೊಡುವ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಬಹಿರಂಗವಾಗಿದೆ. ನಟ ವಿಕ್ಕಿ ಕೌಶಲ್ ಹಾಗೂ ಸಿದ್ದಾರ್ಥ್‌ ಮಲ್ಹೋತ್ರಾ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ವಿಕ್ಕಿ ಕೌಶಲ್‌ ಮುಕ್ತವಾಗಿ ಮಾತನಾಡಿದ್ದಾರೆ. ಕತ್ರೀನಾ ಹಾಗೂ ತಾನು  ಜಗಳವಾಡಿದ್ದನ್ನು ಕೂಡ ಹೇಳಿದ್ದಾರೆ.

ವಿಕ್ಕಿ ಹಾಗೂ ಕತ್ರೀನಾ ಮಧ್ಯೆ ಜಗಳವಾಗ್ತಿರೋದು ಕೋಣೆಯಲ್ಲಿರುವ ಕಬೋರ್ಡ್‌ಗಳ ವಿಚಾರಕ್ಕಂತೆ. ಈಗಾಗ್ಲೇ ಕತ್ರೀನಾ ಇಡೀ ಕೋಣೆಯನ್ನೂ ಆವರಿಸಿಕೊಂಡುಬಿಟ್ಟಿದ್ದಾಳೆ, ತನಗಾಗಿ ಮೀಸಲಿರುವುದು ಒಂದೇ ಒಂದು ಕಬೋರ್ಡ್‌ ಮಾತ್ರ ಅಂತಾ ವಿಕ್ಕಿ ಅಳಲು ತೋಡಿಕೊಂಡಿದ್ದಾರೆ. ಸದ್ಯದಲ್ಲೇ ಅದು ಕೂಡ ಕೈತಪ್ಪಬಹುದು ಅಂತಾನೂ ಹೇಳಿದ್ದಾರೆ.

ಇದೇ ವಿಚಾರಕ್ಕೆ ಕತ್ರೀನಾ ಹಾಗೂ ವಿಕ್ಕಿ ಮಧ್ಯೆ ಆಗಾಗ ಜಗಳವಾಗುತ್ತಲೇ ಇರುತ್ತದೆ ಅನ್ನೋದು ಜಗಜ್ಜಾಹೀರಾಗಿದೆ. ಕಳೆದ ಡಿಸೆಂಬರ್‌ನಲ್ಲಿ ವಿಕ್ಕಿ ಹಾಗೂ ಕತ್ರೀನಾ ಮದುವೆಯಾಗಿದ್ದರು. ಸದ್ಯ ಕತ್ರೀನಾ, ಸಲ್ಮಾನ್ ಖಾನ್ ಜೊತೆ ‘ಟೈಗರ್ 3’ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಕತ್ರೀನಾ ಅಭಿನಯದ ‘ಫೋನ್ ಭೂತ’ ಚಿತ್ರ ಕೂಡ ನವೆಂಬರ್‌ನಲ್ಲಿ ತೆರೆ ಕಾಣಲಿದೆ. ವಿಕ್ಕಿ ಕೌಶಲ್‌ ‘ಸ್ಯಾಮ್ ಬಹದ್ದೂರ್’, ‘ಗೋವಿಂದಾ ನಾಮ್ ಮೇರಾ’ ಮತ್ತು ‘ದಿ ಇಮ್ಮಾರ್ಟಲ್ ಅಶ್ವಥಾಮ’ದಂತಹ ದೊಡ್ಡ ಬ್ಯಾನರ್‌ನ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...