alex Certify ಪತಿ ಜೊತೆ ಸೇರಿ ತವರು ಮನೆಗೇ ಕನ್ನ ಹಾಕಿದ ಮಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಜೊತೆ ಸೇರಿ ತವರು ಮನೆಗೇ ಕನ್ನ ಹಾಕಿದ ಮಗಳು….!

ಹೆಣ್ಣು ಮಕ್ಕಳಿಗೆ ತವರು ಮನೆ ಎಂದರೆ ಬಲು ಪ್ರೀತಿ ಎನ್ನಲಾಗುತ್ತದೆ. ಹೀಗಾಗಿ ತವರಿಗೆ ಬರುವ ಅವಕಾಶ ಸಿಕ್ಕರೆ ಅವರ ಮನಸ್ಸು ಅರಳುತ್ತದೆ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಮನೆಮಗಳೇ ತವರಿಗೆ ವಿಲನ್ ಆಗಿದ್ದಾಳೆ.

ಹೌದು, ಇಂಥದೊಂದು ವಿಚಿತ್ರ ಘಟನೆ ತುಮಕೂರು ಜಿಲ್ಲೆ, ಗುಬ್ಬಿಯಲ್ಲಿ ನಡೆದಿದ್ದು, ಪ್ರವೀಣೆ ಎಂಬಾಕೆ ತನ್ನ ಪತಿ ಗಣೇಶ್ ಎಂಬಾತನ ಜೊತೆ ಸೇರಿ ನಕಲಿ ಕೀ ಮೂಲಕ ತನ್ನ ತವರು ಮನೆ ಪ್ರವೇಶಿಸಿ ಕಳ್ಳತನ ಮಾಡಿದ್ದಾಳೆ.

ಗುಬ್ಬಿ ಪಟ್ಟಣದ ಹೇಮಾವತಿ ವಸತಿಗೃಹದಲ್ಲಿದ್ದ ತನ್ನ ಪೋಷಕರು ಹೊರ ಹೋಗಿದ್ದನ್ನು ತಿಳಿದಿದ್ದ ಪ್ರವೀಣೆ, ಜುಲೈ 9ರಂದು ಪತಿ ಜೊತೆ ಸೇರಿ 300 ಗ್ರಾಂ ಚಿನ್ನ, ಮೂರು ಲಕ್ಷ ರೂ ನಗದು ಕಳವು ಮಾಡಿದ್ದಳು.

ಮನೆಯಲ್ಲಿ ನಗ – ನಗದು ಕಳುವಾಗಿದ್ದನ್ನು ಕಂಡ ಪ್ರವೀಣೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ವೇಳೆ ಈ ಆಘಾತಕಾರಿ ಸಂಗತಿ ಬಯಲಾಗಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...