alex Certify ಪತಿಯನ್ನು ಹೀಗೆ ತನ್ನ ಮುಷ್ಠಿಯೊಳಗಿಟ್ಟುಕೊಂಡಿರ್ತಾಳೆ ʼಪತ್ನಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯನ್ನು ಹೀಗೆ ತನ್ನ ಮುಷ್ಠಿಯೊಳಗಿಟ್ಟುಕೊಂಡಿರ್ತಾಳೆ ʼಪತ್ನಿʼ

ಮನೆಯಲ್ಲಿ ನಾನು ಹೇಳಿದ್ದೇ ವೇದವಾಕ್ಯ. ನಾನು ಹೇಳಿದಂತೆ ಎಲ್ಲರೂ ಕೇಳ್ತಾರೆ ಎಂದು ಅನೇಕ ಗಂಡಸರು ನಂಬಿರ್ತಾರೆ. ವಾಸ್ತವವಾಗಿ ಇದು ಸುಳ್ಳಾಗಿರುತ್ತದೆ. ಪತಿಗೆ ಗೊತ್ತಿಲ್ಲದೆ ಪತ್ನಿಯಾದವಳು ತನ್ನ ಕೆಲಸ ಸಾಧಿಸಿಕೊಂಡಿರುತ್ತಾಳೆ.

ಸಾಮಾನ್ಯವಾಗಿ ಪತ್ನಿ, ಪತಿಗೆ ಯಾವುದು ಇಷ್ಟ ಯಾವುದು ಕಷ್ಟ ಎಂಬುದನ್ನು ಅರಿತಿರುತ್ತಾಳೆ. ಈ ಆಯುಧವನ್ನು ಬಳಸಿ ಪತಿಯನ್ನು ತನ್ನ ದಾರಿಗೆ ತರುವ ಚಾಲಾಕಿತನ ಆಕೆಗೆ ತಿಳಿದಿರುತ್ತದೆ.

ಬೇರೆ ದಂಪತಿಯ ಉದಾಹರಣೆಯನ್ನು ಪತ್ನಿ ನಿಮ್ಮ ಮುಂದಿಟ್ಟಿದ್ದಾಳೆಂದ್ರೆ ಆಕೆ ನಿಮಗೇನೋ ಸೂಚನೆ ನೀಡ್ತಿದ್ದಾಳೆ ಎಂದು ಅರ್ಥ ಮಾಡಿಕೊಳ್ಳಿ.

ಯಾವುದೋ ಪತಿ ಆತನ ಪತ್ನಿಗೆ ಹುಟ್ಟುಹಬ್ಬದಂದು ಡೈಮಂಡ್ ರಿಂಗ್ ನೀಡಿದ್ದಾನೆಂದ್ರೆ ನೀವು ಎಚ್ಚೆತ್ತುಕೊಳ್ಳಿ. ಯಾಕೆಂದ್ರೆ ಮುಂದಿನ ಸರದಿ ನಿಮ್ಮದಾಗಿರುತ್ತದೆ.

ಮನೆಯ ವಿಚಾರಕ್ಕೆ ಬಂದ್ರೆ ಪತಿಗಿಂತ ಪತ್ನಿ ಮುಂದಿರುತ್ತಾಳೆ. ಮನೆಯ ವಸ್ತು ಖರೀದಿ ಮಾಡೋದಿರಲಿ ಇಲ್ಲ ಮಕ್ಕಳ ಬಟ್ಟೆ ಖರೀದಿ ಇರಲಿ. ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಪರ್ಸ್ ಖಾಲಿ ಮಾಡಿರ್ತಾಳೆ ಮಡದಿ.

ಪತ್ನಿ ಕಣ್ಣಲ್ಲಿ ನೀರು ಬಂದ್ರೆ ಪತಿ ಕರಗಿ ಬಿಡ್ತಾನೆ. ಈ ವಿಚಾರ ಎಲ್ಲ ಪತ್ನಿಯರಿಗೂ ತಿಳಿದಿರುತ್ತದೆ. ಇದನ್ನೇ ಅಸ್ತ್ರ ಮಾಡಿಕೊಂಡು ಪತಿಯಿಂದ ಕೆಲಸ ತೆಗೆದುಕೊಳ್ತಾರೆ ಪತ್ನಿಯರು.

ಏನೂ ಮಾತನಾಡದೇ ಮಹಿಳೆಯರು ಪುರುಷರಿಗೆ ಧಮಕಿ ನೀಡುವ ಕಲೆ ಕಲಿತಿರುತ್ತಾರೆ. ಸೂಕ್ಷ್ಮವಾಗಿ ಬೆದರಿಕೆ ನೀಡಿ ತನ್ನ ಕೆಲಸ ಸಾಧಿಸ್ತಾಳೆ ಮಹಿಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...