alex Certify ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಖುಷಿ ಸುದ್ದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇದೆ. ನೀವು ಸ್ಥಿರ ಠೇವಣಿ ಬಡ್ಡಿದರಗಳನ್ನು ಪಡೆಯಲು ಯೋಜಿಸುತ್ತಿದ್ದರೆ, ಈಗ PNB ವಿಶೇಷ FDಯನ್ನು ತಂದಿದೆ. ಇದರಲ್ಲಿ ನಿಮಗೆ 600 ದಿನಗಳಲ್ಲೇ ದೊಡ್ಡ ಮಟ್ಟದ ಲಾಭ ದೊರೆಯಲಿದೆ.  ಈ ಬಗ್ಗೆ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ತನ್ನ ಅಧಿಕೃತ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ.

ಹೂಡಿಕೆಯ ಮೇಲೆ ನಿಮಗೆ ಉತ್ತಮ ಬಡ್ಡಿ ಸಿಕ್ಕಾಗ, ಉಳಿತಾಯವು ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ ಎಂದು ಬರೆದಿದೆ. ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ನ 600-ದಿನಗಳ ಯೋಜನೆಯಲ್ಲಿ ಶೇ.7.85ರಷ್ಟು ಬಡ್ಡಿ ಸಿಗಲಿದೆ. ಈ ಯೋಜನೆಯ ಲಾಭ ಪಡೆಯಲು, ನೀವು PNB One ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಲ್ಲದೆ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕವೂ ಯೋಜನೆಯನ್ನು ಸಕ್ರಿಯಗೊಳಿಸಬಹುದು.

ಯೋಜನೆಯ ವಿಶೇಷತೆ ಏನು ?

ಈ ವಿಶೇಷ ಪ್ಲಾನ್‌  2022ರ ಅಕ್ಟೋಬರ್‌ 19ರಿಂದ್ಲೇ  ಪ್ರಾರಂಭವಾಗಿದೆ.60 ರಿಂದ 80 ವರ್ಷ ವಯಸ್ಸಿನ ಹಿರಿಯ ನಾಗರಿಕರು ಇದರ ಲಾಭ ಪಡೆದುಕೊಳ್ಳಬಹುದು. 80 ವರ್ಷ ಮೇಲ್ಪಟ್ಟವರಿಗೂ ಸಹ ಅವಕಾಶವಿದೆ. ಈ ಒಟ್ಟು ಮೊತ್ತದ ಅಡಿಯಲ್ಲಿ ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತವನ್ನು ಠೇವಣಿ ಇಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...