alex Certify ಪಂಜಾಬ್‌ ನಲ್ಲಿ ಆಮ್‌ ಆದ್ಮಿ ನಾಗಾಲೋಟ; ಆಡಳಿತರೂಢ ಕಾಂಗ್ರೆಸ್‌ ಗೆ ಹಿನ್ನಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬ್‌ ನಲ್ಲಿ ಆಮ್‌ ಆದ್ಮಿ ನಾಗಾಲೋಟ; ಆಡಳಿತರೂಢ ಕಾಂಗ್ರೆಸ್‌ ಗೆ ಹಿನ್ನಡೆ

ಪಂಜಾಬ್‌ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ನಡೆದಿದ್ದು, ಆರಂಭಿಕ ಹಂತದ ಮತ ಎಣಿಕೆ ಕಾರ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಹಿನ್ನಡೆಯನ್ನು ಸಾಧಿಸಿದೆ. ಕಾಂಗ್ರೆಸ್‌ ಕೇವಲ 20 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಸಾಧಿಸಿದೆ. ಆದರೆ ಆಮ್‌ ಆದ್ಮಿ ಪಕ್ಷ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಇನ್ನುಳಿದಂತೆ ಶಿರೋಮಣಿ ಅಕಾಲಿ ದಳ 5 ಹಾಗೂ ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆರಂಭಿಕ ಹಂತದ ಮತ ಎಣಿಕೆಯಲ್ಲಿ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಉತ್ಸಾಹ ಇಮ್ಮಡಿಸಿದೆ.

ಆದರೆ ಇದು ಆರಂಭಿಕ ಹಂತದ ಮತ ಎಣಿಕೆ ಮಾತ್ರವಾಗಿದ್ದು, ಇನ್ನೂ ಹಲವು ಸುತ್ತುಗಳ ಮತ ಎಣಿಕೆ ನಡೆಯಬೇಕಾಗಿದೆ. ಇನ್ನುಳಿದಂತೆ ಗೋವಾದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಬಿರುಸಿನ ಪೈಪೋಟಿ ನಡೆದಿದೆ. ಬಹುತೇಕ ಇಂದು ಸಂಜೆಯೊಳಗಾಗಿ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಯಾರು ಅಧಿಕಾರದ ಗದ್ದುಗೆಗೇರಲಿದ್ದಾರೆ ಎಂಬುದು ಖಚಿತವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...