alex Certify ನೋಡ ನೋಡುತ್ತಿದ್ದಂತೆಯೇ ಗಾಳಿಯಲ್ಲಿ ಹಾರಿದ ವಿಗ್​..! ಪೇಚಿಗೆ ಸಿಲುಕಿದ ಬೋಳು ತಲೆಯ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡ ನೋಡುತ್ತಿದ್ದಂತೆಯೇ ಗಾಳಿಯಲ್ಲಿ ಹಾರಿದ ವಿಗ್​..! ಪೇಚಿಗೆ ಸಿಲುಕಿದ ಬೋಳು ತಲೆಯ ವ್ಯಕ್ತಿ

ಯೂನಿಸ್​ ಚಂಡಮಾರುತವು ಬಲವಾದ ಗಾಳಿ ಬೀಸಿದ ಹೊಡೆತಕ್ಕೆ ಬೋಳು ತಲೆಯ ಮನುಷ್ಯನ ವಿಗ್​​ ಹಾರಿ ಹೋದ ವಿಚಿತ್ರ ಘಟನೆಯೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಗಾಳಿಯಲ್ಲಿ ಹಾರಿ ಹೋಗುತ್ತಿದ್ದ ವಿಗ್​ನ್ನು ಹಿಡಿಯಲು ಬೋಳು ತಲೆಯ ವ್ಯಕ್ತಿಯು ವಿಗ್​ನ ಹಿಂದೆ ಓಡಿ ಹೋಗಿದ್ದಾನೆ.

ಸೈಮನ್​ ವಿಲ್ಕ್ಸ್ ಎಂಬವರು ಇಂಗ್ಲೆಂಡ್​ನ ಬಾರ್ನ್​ಸ್ಟೇಪಲ್​​ನ​​ ಕಾರು ಪಾರ್ಕಿಂಗ್​​ನಲ್ಲಿ ನಿಂತಿದ್ದ ವೇಳೆಯಲ್ಲಿ ಗಾಳಿಯ ರಭಸಕ್ಕೆ ತಲೆಯ ಮೇಲಿದ್ದ ವಿಗ್​ ಹಾರಿ ಹೋಗಿದೆ.

ಅವರು ತಮ್ಮ ವಿಗ್​ನ್ನು ಹಿಡಿಯಲು ಹಿಂದೆ ಹಿಂದೆ ಓಡಿದ್ದು ಈ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಬ್ರಿಟನ್​ನಲ್ಲಿ ಅತ್ಯಂತ ಕೆಟ್ಟ ಚಂಡಮಾರುತವು ಬೀಸುತ್ತಿರೊದ್ರಿಂದ ಲಕ್ಷಾಂತರ ಸಂಖ್ಯೆಯ ಬ್ರಿಟಿಷ್ ಜನತೆಗೆ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಐಲ್ ಆಫ್ ವೈಟ್‌ನಲ್ಲಿ ದಾಖಲೆಯ 122mph ಗಾಳಿಯ ತೀವ್ರತೆಯನ್ನು ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...