alex Certify ನೋಡ ನೋಡುತ್ತಿದ್ದಂತೆಯೇ ಕುಸಿದು ಬಿತ್ತು ಮೊರ್ಬಿ ಬ್ರಿಡ್ಜ್; ಆಘಾತಕಾರಿ ದೃಶ್ಯದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡ ನೋಡುತ್ತಿದ್ದಂತೆಯೇ ಕುಸಿದು ಬಿತ್ತು ಮೊರ್ಬಿ ಬ್ರಿಡ್ಜ್; ಆಘಾತಕಾರಿ ದೃಶ್ಯದ ವಿಡಿಯೋ ವೈರಲ್

ಭಾನುವಾರದಂದು ಗುಜರಾತಿನ ಮೊರ್ಬಿ ನಗರದ ಹ್ಯಾಂಗಿಂಗ್ ಬ್ರಿಡ್ಜ್ ಕುಸಿದು ಬಿದ್ದ ಪರಿಣಾಮ 140ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಕಾಣೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಭೀತಿ ವ್ಯಕ್ತವಾಗಿದೆ.

ಇದರ ಮಧ್ಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಕೇಬಲ್ ಬ್ರಿಡ್ಜ್ ಕುಸಿದು ಬಿದ್ದಿರುವ ದೃಶ್ಯದ ವಿಡಿಯೋ ಹರಿದಾಡುತ್ತಿದ್ದು ವೈರಲ್ ಆಗಿದೆ. ವಿಡಿಯೋ ತೆಗೆಯುತ್ತಿದ್ದ ವ್ಯಕ್ತಿ ಒಂದು ಬದಿಯಲ್ಲಿದ್ದರೆ ಮತ್ತೊಂದು ಬದಿಯಲ್ಲಿ ನೂರಾರು ಮಂದಿ ಸಾರ್ವಜನಿಕರಿದ್ದಾರೆ.

ಈ ವೇಳೆ ನೋಡ ನೋಡುತ್ತಿದ್ದಂತೆಯೇ ಬ್ರಿಡ್ಜ್ ಕುಸಿದು ಬಿದ್ದಿದ್ದು, ಆಘಾತಕಾರಿ ಘಟನೆಯ ವಿಡಿಯೋ ಬೆಚ್ಚಿ ಬೀಳಿಸುವಂತಿದೆ. ಭಾನುವಾರದ ರಜೆಯನ್ನು ಆನಂದಿಸಲು ಬಂದಿದ್ದವರು, ಕ್ಷಣಾರ್ಧದಲ್ಲಿ ನೀರಿಗೆ ಬಿದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...