alex Certify ನೆಟ್ಟಿಗರ ತಲೆ ಕೆಡಿಸಿದ ಬಿಸಿ ಫಿಲ್ಟರ್ ಕಾಫಿ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ತಲೆ ಕೆಡಿಸಿದ ಬಿಸಿ ಫಿಲ್ಟರ್ ಕಾಫಿ ಚಿತ್ರ

ಚೆನ್ನೈ: ಇಲ್ಲಿನ ಕಲಾವಿದರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡ ಚಿತ್ರವೊಂದು ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಫಿಲ್ಟರ್ ಕಾಫಿ ಯಾರಿಗೆ ಗೊತ್ತಿಲ್ಲ? ಬಿಸಿಯಾದ, ಹಬೆಯಾಡುವ ಕಾಫಿ ಯಾರಿಗೆ ತಾನೆ ಇಷ್ಟವಾಗುವುದಿಲ್ಲ? ದಿನವಿಡೀ ದುಡಿಮೆಗೆ ಚೈತನ್ಯ ನೀಡಲು ಅಥವಾ ದುಡಿದು ದಣಿದು ಬಂದ ದೇಹ ಹಾಗೂ ಮನಸ್ಸಿಗೆ ಆಹ್ಲಾದವುಂಟು ಮಾಡಲು ಸ್ವಾದಭರಿತ ಕಾಫಿ ಉತ್ತಮವೆಂದು ಹಲವರ ಅನಿಸಿಕೆ. ಆದರೆ, ನಿಮಗೆ ಇಲ್ಲಿ ನಾವು ಬಿಸಿ ಕಾಫಿ ಕೊಡುತ್ತಿಲ್ಲ. ಹಬೆಯಾಡುತ್ತಿರುವ ಕಾಫಿಯ ಚಿತ್ರವೊಂದನ್ನು ತೋರಿಸುತ್ತಿದ್ದೇವೆ. ಇದು ಖಂಡಿತ ನಿಮ್ಮನ್ನು ಚಕಿತರನ್ನಾಗಿಸುತ್ತದೆ.

ಈ ಚಿತ್ರವು ನಿಜವಾದ ಫಿಲ್ಟರ್ ಕಾಫಿಯೊಂದರದು ಎಂದು ನೀವು ನಂಬುವಂತೆ ಮಾಡುತ್ತದೆ. ಅಷ್ಟೊಂದು ನೈಜವಾಗಿದೆ. ಆದರೆ, ಅದನ್ನು ಹಲವು ಸಲ ಝೂಮ್ ಮಾಡಿ ನೋಡಿದರೆ, ಈ ಕಲಾವಿದನ ಕೈಚಳಕ ಎನ್ನುವುದು ಮರೆಯಾಗುತ್ತದೆ. ಈಗ ಹೇಳಿ, ಇಂತಹ ಬಿಸಿ ಬಿಸಿ ಫಿಲ್ಟರ್ ಕಾಫಿ ಸಿಕ್ಕರೆ ನೀವು ಬೇಡವೆನ್ನುತ್ತೀರಾ?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...