alex Certify ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಂಗನಾ, ಅಷ್ಟಕ್ಕೂ ಆಕೆ ಮಾಡಿದ್ದೇನು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಂಗನಾ, ಅಷ್ಟಕ್ಕೂ ಆಕೆ ಮಾಡಿದ್ದೇನು ಗೊತ್ತಾ…..?

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸದಾ ಒಂದಲ್ಲಾ ಒಂದು ವಿಷಯದಿಂದ ಸುದ್ದಿಯಲ್ಲಿರ್ತಾರೆ. ಆದ್ರೆ ಈಗ ವೈರಲ್ ಆಗ್ತಿರೊ ಕಂಗನಾಳ ವಿಡಿಯೋವೊಂದು ನೆಟ್ಟಿಗರ ಬೇಸರಕ್ಕೆ, ಅಸಹಾಯಕತೆಗೆ ಕಾರಣವಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಂಗನಾ ರೆಸ್ಟೋರೆಂಟ್ ಒಂದರಲ್ಲಿ ಕುಳಿತುಕೊಂಡಿದ್ದಾರೆ, ಅವರ ಸುತ್ತಾಮುತ್ತ ಫೋಟೊಗ್ರಾಪರ್ ಗಳಿದ್ದಾರೆ. ಫೋಟೊಗೆ ಪೋಸ್ ಕೊಡುವ ಸಲುವಾಗಿ, ಕಂಗನಾ ತನ್ನ ಮುಂದಿದ್ದ ಟ್ರೇ ಇಂದ ಪೇಸ್ಟ್ರಿ(ಕೇಕ್) ಒಂದನ್ನ ತೆಗೆದುಕೊಂಡು ತನ್ನ ಬಾಯಿ ಹತ್ತಿರ ಹಿಡಿದಿದ್ದಾರೆ. ಫೋಟೊಗಳನ್ನ ಕ್ಲಿಕ್ಕಿಸಿದ ಮೇಲೆ ಕಂಗನಾ ಆ ಪೇಸ್ಟ್ರಿಯನ್ನ ತಿನ್ನದೆ ಮತ್ತೆ ಅದೇ ತರಹದ ಪೇಸ್ಟ್ರಿಗಳಿದ್ದ ಟ್ರೇಯೊಳಗೆ ಇಟ್ಟಿದ್ದಾರೆ. ಈ ವಿಡಿಯೋವನ್ನ ನೋಡಿರುವ ಪ್ರೇಕ್ಷಕರು, ಕಂಗನಾಳ ನಡೆಯನ್ನ ಪ್ರಶ್ನಿಸಿದ್ದಾರೆ. ನಟಿಯು ಬೇಜವಬ್ದಾರಿ ತೋರಿದ್ದಾರೆ, ದೇಶದೆಲ್ಲೆಡೆ ಕೋವಿಡ್ ಹರಡುತ್ತಿರುವಾಗ ಇಂಥಾ ನಡೆ ಎಷ್ಟು ಸರಿ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ವೀಡಿಯೊದ ಕಾಮೆಂಟ್ ಬಾಕ್ಸ್ ನಲ್ಲಿ, ಈಕೆ ಕೊರೋನಾ ಸಮಯದಲ್ಲಿ ಮಾಲಿನ್ಯ ಹರಡುತ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.‌ ಕಂಗನಾ ಪೇಸ್ಟ್ರಿಯನ್ನ ಸ್ಪರ್ಶಿಸಿ ಉಸಿರಾಡುವ ಮೂಲಕ ಅದನ್ನು ಕಲುಷಿತಗೊಳಿಸಿದ್ದಾರೆ, ಈಗ ಅದನ್ನು ಬೇರೆಯವರು ತಿನ್ನುತ್ತಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, “ಕೋವಿಡ್ ಸಮಯದಲ್ಲಿ ಆಕೆ ಇದನ್ನು ಹೇಗೆ ಮಾಡಬಹುದು? ಖಂಡಿತವಾಗಿಯೂ ಕಂಗನಾ ರೋಗಾಣುಗಳನ್ನು ಹರಡುತ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...