alex Certify ನೂತನ ವಧು-ವರರಿಗೆ ಉಡುಗೊರೆ ಕೊಡುವ ಮುನ್ನ ಈ ವಿಷಯ ತಿಳಿದಿರಲಿ, ಇಲ್ಲದಿದ್ದರೆ ಮುರಿದು ಹೋಗಬಹುದು ಅವರ ಸಂಬಂಧ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೂತನ ವಧು-ವರರಿಗೆ ಉಡುಗೊರೆ ಕೊಡುವ ಮುನ್ನ ಈ ವಿಷಯ ತಿಳಿದಿರಲಿ, ಇಲ್ಲದಿದ್ದರೆ ಮುರಿದು ಹೋಗಬಹುದು ಅವರ ಸಂಬಂಧ….!

ಮದುವೆಯಂತಹ ಶುಭ ಸಮಾರಂಭಗಳಲ್ಲಿ ಉಡುಗೊರೆ ನೀಡುವ ಸಂಪ್ರದಾಯ ಶತಮಾನಗಳಿಂದಲೂ ಇದೆ. ಹಿಂದೂ ಧರ್ಮದಲ್ಲಿ ಮದುವೆಯನ್ನು ಮಂಗಳಕರ ಕಾರ್ಯ ಎಂದು ಪರಿಗಣಿಸಲಾಗುತ್ತದೆ. ಇದನ್ನು 16 ಸಂಸ್ಕಾರಗಳಲ್ಲಿ ಪ್ರಮುಖವೆಂದು ಪರಿಗಣಿಸಲಾಗಿದೆ. ಮದುವೆಯಂತಹ ಪವಿತ್ರ ಬಂಧಕ್ಕೆ ಒಳಗಾಗುವ ಮೂಲಕ ವಧು ಮತ್ತು ವರ ಹೊಸ ಜೀವನವನ್ನು ಪ್ರಾರಂಭಿಸುತ್ತಾರೆ. ನಾವೂ ಕೂಡ ಯಾರ ಮದುವೆಗೆ ಹೋದರೂ ಏನಾದರೂ ಗಿಫ್ಟ್ ಕೊಡುತ್ತೇವೆ.

ಆದರೆ ವಾಸ್ತು ಪ್ರಕಾರ ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ ಕೊಡಬಾರದು. ಅವುಗಳನ್ನು ವಧು-ವರರಿಗೆ ಕೊಟ್ಟರೆ ಅವರ ದಾಂಪತ್ಯ ಜೀವನಕ್ಕೇ ಕೆಡುಕಾಗಬಹುದು. ಹಾಗಾಗಿ ಈ ಶುಭ ಸಂದರ್ಭದಲ್ಲಿ ವಧು-ವರರಿಗೆ ಯಾವ ಉಡುಗೊರೆಯು ಶುಭಕರವಾಗಿರುತ್ತದೆ ಮತ್ತು ಯಾವುದನ್ನು ಕೊಡಬಾರದು ಅನ್ನೋದನ್ನು ನೋಡೋಣ.

ಆಭರಣ: ಮದುವೆಯಲ್ಲಿ ಆಭರಣಗಳನ್ನು ಉಡುಗೊರೆಯಾಗಿ ನೀಡುವುದು ಸಂಪ್ರದಾಯ. ಇದಕ್ಕೆ ಸಾಕಷ್ಟು ಮಹತ್ವವಿದೆ. ಶಾಸ್ತ್ರಗಳ ಪ್ರಕಾರ ವಧು ಮತ್ತು ವರನಿಗೆ ಬೆಳ್ಳಿ ಅಥವಾ ಚಿನ್ನದ ಆಭರಣಗಳನ್ನು ನೀಡಬಹುದು. ಇದಲ್ಲದೇ ತಾಮ್ರ, ಕಂಚು ಮುಂತಾದವುಗಳಿಂದ ಮಾಡಿದ ಪಾತ್ರೆಗಳನ್ನೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಅಲಂಕಾರದ ವಸ್ತುಗಳು: ಮದುವೆಯಲ್ಲಿ ವಧು-ವರರಿಗೆ ಮನೆಯ ಅಲಂಕಾರದ ವಸ್ತುಗಳನ್ನು ಸಹ ನೀಡಬಹುದು. ಆದರೆ ಈ ಉಡುಗೊರೆಗಳು ವಾಸ್ತು ಪ್ರಕಾರ ಇರಬೇಕು ಎಂಬುದನ್ನು ನೆನಪಿನಲ್ಲಿಡಿ, ಇದರಿಂದ ನಕಾರಾತ್ಮಕತೆಯು ವಧು ಮತ್ತು ವರರ ಜೀವನದಿಂದ ದೂರವಿರುತ್ತದೆ.

ಮೇಕಪ್ ವಸ್ತುಗಳು: ಮದುವೆಯಲ್ಲಿ ವಧುವಿಗೆ ಮೇಕಪ್ ಮತ್ತು ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದ ವಸ್ತುಗಳನ್ನು ನೀಡುವುದು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ. ಅದೊಂದು ಭಾಗ್ಯವೂ ಹೌದು.

ಶಗುನ ಲಕೋಟೆ: ಮದುವೆಯ ಶುಭ ಸಂದರ್ಭದಲ್ಲಿ ಲಕೋಟೆಯಲ್ಲಿ ಹಣವಿಟ್ಟು ಕೊಡುವವರೇ ಹೆಚ್ಚು. ಆದರೆ ಇದನ್ನು ಕೊಡುವಾಗ ಕೊಡುವಾಗ ಒಂದು ರೂಪಾಯಿ ನಾಣ್ಯವನ್ನು ಜೊತೆಗೆ ಹಾಕಬೇಕು. 1100, 2100 ಅಥವಾ 5100 ರೂಪಾಯಿಗಳನ್ನು ಈ ರೀತಿ ನೀಡಬಹುದು. ಮದುವೆ ಮತ್ತು ಶುಭ ಕಾರ್ಯಗಳಲ್ಲಿ 100, 200, 500 ಈ ರೀತಿಯ ಮೊತ್ತವನ್ನು ನೀಡಬಾರದು. ಅದರ ಜೊತೆಗೆ ಹೆಚ್ಚುವರಿಯಾಗಿ ಒಂದು ರೂಪಾಯಿಯನ್ನು ಸೇರಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...