alex Certify ನೀವೂ ಬಳಸ್ತಿದ್ದೀರಾ ಗೂಗಲ್‌ ತೆಗೆದು ಹಾಕಿರೋ ಈ ಅಪ್ಲಿಕೇಶನ್ಸ್ ? ಹಾಗಾದ್ರೆ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ಬಳಸ್ತಿದ್ದೀರಾ ಗೂಗಲ್‌ ತೆಗೆದು ಹಾಕಿರೋ ಈ ಅಪ್ಲಿಕೇಶನ್ಸ್ ? ಹಾಗಾದ್ರೆ ಈ ಸುದ್ದಿ ಓದಿ

ಆಂಡ್ರಾಯ್ಡ್ ಬಳಕೆದಾರರಿಗೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ ಅತ್ಯಂತ ವಿಶ್ವಾಸಾರ್ಹ ವೇದಿಕೆಗಳಲ್ಲಿ ಒಂದಾಗಿದೆ. ಐಫೋನ್ ಬಳಕೆದಾರರು ಆಪ್ ಸ್ಟೋರ್‌ ಅನ್ನು ನೆಚ್ಚಿಕೊಂಡಿದ್ದಾರೆ. ಪ್ಲೇ ಸ್ಟೋರ್‌ನಲ್ಲಿರುವ ಅಪ್ಲಿಕೇಶನ್‌ಗಳ ಕುರಿತು Google ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ.

ಆದರೂ ವಂಚಕರು ಅಪ್ಲಿಕೇಶನ್‌ಗಳಿಗೆ ಮಾಲ್‌ವೇರ್ ಅನ್ನು ಇಂಜೆಕ್ಟ್ ಮಾಡಲು ಮತ್ತು ಬಳಕೆದಾರರಿಂದ ಹಣ ಮತ್ತು ಡೇಟಾವನ್ನು ಕದಿಯಲು ಹೊಸ ವಿಧಾನಗಳನ್ನು ಬಳಸುತ್ತಾರೆ. ಇಂತಹ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಕ್ಲೌಡ್ ಸೆಕ್ಯುರಿಟಿ ಕಂಪನಿ Zscaler ಇದೀಗ ಮಾಲ್‌ವೇರ್‌ನಿಂದ ಸೋಂಕಿಗೆ ಒಳಗಾದ ಕಾರಣ ಗೂಗಲ್ ಇತ್ತೀಚೆಗೆ 50ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿದೆ.

Zscaler ತನ್ನ ThreatLabz ತಂಡವು Google Play ನಲ್ಲಿ ಮೂರು ವಿಭಿನ್ನ Joker, Facestealer ಮತ್ತು Coper ಎಂಬ ಮಾಲ್‌ವೇರ್ಗಳಿಂದ ತೊಂದರೆಗೊಳಗಾಗಿರುವ ಅಪ್ಲಿಕೇಶನ್‌ಗಳನ್ನು ಕಂಡು ಹಿಡಿದಿದೆ.

ಈ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವು ಜೋಕರ್ ಮಾಲ್‌ವೇರ್‌ನಿಂದ ಸಮಸ್ಯೆಗೆ ಸಿಲುಕಿವೆ. ಇದು ನಿಸ್ಸಂದೇಹವಾಗಿ ಆಂಡ್ರಾಯ್ಡ್ ಸಾಧನಗಳನ್ನು ಗುರಿಯಾಗಿಸುವ ಪ್ರಮುಖ ಮಾಲ್‌ವೇರ್‌ಗಳಲ್ಲೊಂದು. ಜೋಕರ್ ಮಾಲ್‌ವೇರ್, ಕೋಡ್‌ ನವೀಕರಣ, ಕಾರ್ಯಗತಗೊಳಿಸುವ ವಿಧಾನಗಳು ಮತ್ತು ಪೇಲೋಡ್-ಮರುಪಡೆಯುವ ತಂತ್ರಗಳನ್ನು ಒಳಗೊಂಡಂತೆ ಮಾಲ್‌ವೇರ್‌ನ ಟ್ರೇಸ್ ಸಿಗ್ನೇಚರ್‌ಗಳನ್ನು ನಿಯಮಿತವಾಗಿ ಮಾರ್ಪಡಿಸುವ ಮೂಲಕ Google ನ ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗೆ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ. ಈ ಮಾಲ್‌ವೇರ್ ಅನ್ನು SMS ಸಂದೇಶಗಳು, ಕಾಂಟಾಕ್ಟ್ಸ್‌ ಮತ್ತು ಡಿವೈಸ್‌ ಮಾಹಿತಿಯನ್ನು ಕದಿಯಲು ಹಾಗೂ ಪ್ರೀಮಿಯಂ ವೈರ್‌ಲೆಸ್ ಅಪ್ಲಿಕೇಶನ್ ಪ್ರೋಟೋಕಾಲ್ (WAP) ಸೇವೆಗಳಿಗೆ ಸೈನ್ ಅಪ್ ಮಾಡಲು ವಿನ್ಯಾಸಗೊಳಿಸಲಾಗಿದೆ.

ಈ ಅಪ್ಲಿಕೇಶನ್‌ಗಳ ಬಗ್ಗೆ ಮಾಹಿತಿ ಪಡೆದ ಗೂಗಲ್‌ ಕೂಡಲೇ ಅವುಗಳನ್ನು ರಿಮೂವ್‌ ಮಾಡಿದೆ. ಆದರೆ ಇದರಿಂದ ಸಮಸ್ಯೆ ಬಗೆಹರಿಯಲಿಲ್ಲ. ಏಕೆಂದರೆ ಈ ಎಲ್ಲಾ ಅಪ್ಲಿಕೇಶನ್‌ಗಳನ್ನು ಈಗಾಗಲೇ ಸಾವಿರಾರು ಆಂಡ್ರಾಯ್ಡ್ ಬಳಕೆದಾರರು ಡೌನ್‌ಲೋಡ್ ಮಾಡಿದ್ದಾರೆ. ಹಾಗಾಗಿ ಗೂಗಲ್‌ ತೆಗೆದು ಹಾಕಿರೋ ಅಪ್ಲಿಕೇಶನ್‌ಗಳ ಪೈಕಿ ಯಾವುದನ್ನಾದರು ನೀವು ಕೂಡ ಡೌನ್ಲೋಡ್‌ ಮಾಡಿಕೊಂಡಿದ್ದರೆ ಕೂಡಲೇ ಅದನ್ನು ಡಿಲೀಟ್‌ ಮಾಡಿಬಿಡಿ. ಆ 50 ಅಪ್ಲಿಕೇಶನ್‌ಗಳ ಪಟ್ಟಿ ಇಂತಿದೆ,

-Universal PDF Scanner

-Private Messenger

-Premium SMS

-Smart Messages

-Text Emoji SMS

-Blood Pressure Checker

-Funny Keyboard

-Memory Silent Camera

-Custom Themed Keyboard

-Light Messages

-Themes Photo Keyboard

-Send SMS

-Themes Chat Messenger

-Instant Messenger

-Cool Keyboard

-Fonts Emoji Keyboard

-Mini PDF Scanner

-Smart SMS Messages

-Creative Emoji Keyboard

-Fancy SMS

-Fonts Emoji Keyboard

-Personal Message

-Funny Emoji Message

-Magic Photo Editor

-Professional Messages

-All Photo Translator

-Chat SMS

-Smile Emoji

-Wow Translator

-All Language Translate

-Cool Messages

-Blood Pressure Diary

-Chat Text SMS

-Hi Text SMS

-Emoji Theme Keyboard

-iMessager

-Text SMS

-Camera Translator

-Come Messages

-Painting Photo Editor

-Rich Theme Message

-Quick Talk Message

-Advanced SMS

-Professional Messenger

-Classic Game Messenger

-Style Message

-Private Game Messages

-Timestamp Camera

-Social Message

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...