alex Certify ನೀವು ಹಾರ್ಲಿಕ್ಸ್ ಜ್ಯೂಸ್ ಸವಿದಿರಬಹುದು…..ಎಂದಾದ್ರೂ ಈ ಬರ್ಫಿ ಟೇಸ್ಟ್ ಮಾಡಿದ್ದೀರಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಹಾರ್ಲಿಕ್ಸ್ ಜ್ಯೂಸ್ ಸವಿದಿರಬಹುದು…..ಎಂದಾದ್ರೂ ಈ ಬರ್ಫಿ ಟೇಸ್ಟ್ ಮಾಡಿದ್ದೀರಾ..?

ವಿಲಕ್ಷಣವಾದ ಪಾಕವಿಧಾನಗಳು ಅಂತರ್ಜಾಲದಲ್ಲಿ ಇತ್ತೀಚೆಗೆ ಅತಿ ಹೆಚ್ಚು ವೈರಲ್ ಆಗುತ್ತಿವೆ. ಕೆಲವೊಂದು ಖಾದ್ಯಗಳನ್ನು ನೆಟ್ಟಿಗರು ಇಷ್ಟಪಟ್ಟರೆ, ಇನ್ನೂ ಕೆಲವನ್ನು ನೋಡುತ್ತಲೇ ಅಸಹ್ಯ ಪಟ್ಟುಕೊಂಡಿದ್ದಾರೆ. ಇದೀಗ ಹೊಸ ಶೈಲಿಯ ಖಾದ್ಯ ಪಾಕಶಾಲೆಗೆ ಎಂಟ್ರಿ ಕೊಟ್ಟಿದೆ. ಅದೇನೆಂದ್ರೆ ಹಾರ್ಲಿಕ್ಸ್ ಬರ್ಫಿ..!

ಹೌದು, ಬಿಸಿ ಹಾಲಿಗೆ ಹಾರ್ಲಿಕ್ಸ್ ಪೌಡರ್ ಹಾಕಿ ನೀವು ಕುಡಿದಿರಬಹುದು. ಅಥವಾ ಹಾರ್ಲಿಕ್ಸ್ ಕೋಲ್ಡ್ ಜ್ಯೂಸ್ ಕುಡಿದಿರಬಹುದು. ಆದ್ರೆ, ಎಂದಾದ್ರೂ ಹಾರ್ಲಿಕ್ಸ್ ಬರ್ಫಿ ಬಗ್ಗೆ ಕೇಳಿದ್ದೀರಾ..? ಹಾಗಿದ್ರೆ ಇಲ್ಲೊಂದು ವೈರಲ್ ಆಗಿರುವ ವಿಡಿಯೋ ನೋಡಿದ್ರೆ, ನಿಮಗೂ ಕೂಡ ಮನೆಯಲ್ಲಿ ತಯಾರಿಸಬೇಕು ಅನ್ನೋ ಐಡಿಯಾ ಬರಬಹುದು..!

ದೆಹಲಿಯ ಮೌಜ್‌ಪುರದಲ್ಲಿರುವ ಶಾಗುನ್ ಸ್ವೀಟ್ಸ್ ಶಾಪ್ ಈ ವಿನೂತನ ಸಿಹಿಖಾದ್ಯವನ್ನು ತಯಾರಿಸಿದೆ. ಹಾರ್ಲಿಕ್ಸ್ ಬರ್ಫಿಯನ್ನು ತಯಾರಿಸುವ ವಿಡಿಯೋವನ್ನು ಆಹಾರ ಬ್ಲಾಗರ್ ಅರ್ಜುನ್ ಚೌಹಾಣ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊದಲಿಗೆ ತುಪ್ಪಕ್ಕೆ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಸಕ್ಕರೆ ಹಾಕಲಾಗಿದೆ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಮಾಲ್ಟ್ ಪೌಡರ್ ಅನ್ನು ಹಾಕಿ ತಿರುವಿದ್ದಾರೆ. ಕೊನೆಗೆ ಹಾರ್ಲಿಕ್ಸ್ ಪೌಡರ್, ಡ್ರೈ ಫ್ರೂಟ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ದು, ಸವಿಯಲು ರುಚಿಯಾದ ಹಾರ್ಲಿಕ್ಸ್ ಬರ್ಫಿ ರೆಡಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು 487ಕೆ ಮಂದಿ ವೀಕ್ಷಿಸಿದ್ದು, ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ಹಲವು ಮಂದಿ ತಾವು ಕೂಡ ಇದನ್ನು ಪ್ರಯತ್ನಿಸಲು ಇಷ್ಟಪಟ್ಟಿದ್ರೆ, ಇನ್ನೂ ಕೆಲವರು ಋಣಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...