alex Certify ನೀವು ನಿದ್ರಿಸುವಾಗ ಬೆಡ್ ಮೇಲೆ ನಿಮ್ಮ ಪೆಟ್‌ ಗೆ ಜಾಗ ಕೊಡಬೇಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ನಿದ್ರಿಸುವಾಗ ಬೆಡ್ ಮೇಲೆ ನಿಮ್ಮ ಪೆಟ್‌ ಗೆ ಜಾಗ ಕೊಡಬೇಡಿ…!

ಸಾಮಾನ್ಯವಾಗಿ  ಎಲ್ಲರೂ ತಮ್ಮ ಮುದ್ದಿನ ನಾಯಿ ಅಥವಾ ಬೆಕ್ಕನ್ನು ತಮ್ಮ ಬೆಡ್ ಮೇಲೆ ಅಥವಾ ಕೋಣೆಯಲ್ಲಿ ಮಲಗಿಸಿಕೊಳ್ತಾರೆ.

ಸಾಕು ಪ್ರಾಣಿಗಳಿಗೂ ತಮ್ಮ ಹಾಸಿಗೆಯಲ್ಲಿ ಜಾಗ ಕೊಡೋದು ಕಾಮನ್ ಆಗ್ಬಿಟ್ಟಿದೆ. ಈ ಅಭ್ಯಾಸದಿಂದ ಆಗುವ ಪ್ರಯೋಜನ ಹಾಗೂ ಹಾನಿಯ ಬಗ್ಗೆ ಆಗಾಗ ಸಂಶೋಧನೆಗಳು ನಡೆಯುತ್ತಲೇ ಇವೆ.

ಪೆಟ್ಸ್ ಹಾಗೂ ವಯಸ್ಸಿಗೆ ಬಂದ ಮಕ್ಕಳ ಜೊತೆಗೆ ಹೆತ್ತವರು ಮಲಗುವುದರಿಂದ ಆಗುವ ತೊಂದರೆಗಳ ಬಗ್ಗೆ ವಿಜ್ಞಾನಿಗಳು ಬೆಳಕು ಚೆಲ್ಲಿದ್ದಾರೆ. ಇದರಿಂದ ಮಕ್ಕಳು ನಕಾರಾತ್ಮಕ ಅಂಶಗಳು ಮತ್ತು ಪರಿಣಾಮಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ.

ಆರೋಗ್ಯ ಸಮಸ್ಯೆ, ದುರ್ಬಲ ಕಾರ್ಯನಿರ್ವಹಣೆ, ಸಮಸ್ಯಾತ್ಮಕ ನಡವಳಿಕೆ, ಲೈಂಗಿಕ ಅಸಾಮಾನ್ಯತೆ ಕೂಡ ಉಂಟಾಗಬಹುದು. ಇದರ ಜೊತೆಜೊತೆಗೆ ಅಂತ್ಯಂತ ಸಮರ್ಪಕವಾದ ಮತ್ತು ತೃಪ್ತಿದಾಯಕ ನಿದ್ದೆ ಕೂಡ ನಿಮಗೆ ದೊರೆಯುವುದಿಲ್ಲ. ಪ್ರಾಣಿ ಮತ್ತು ಮನುಷ್ಯನ ಸಂಬಂಧದ ಮೇಲೂ ಕೋ ಸ್ಲೀಪಿಂಗ್ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಯುರೋಪಿಯನ್ ರಾಷ್ಟ್ರಗಳಲ್ಲಿ ಪಬ್ಲಿಕ್ ಸ್ಲೀಪಿಂಗ್ ಗೆ ಅವಕಾಶವಿಲ್ಲ. ಮಲಗುವ ಕೋಣೆಯೊಳಗೆ ವಿಸಿಟರ್ ಗಳ ಪ್ರವೇಶ ಸಾಮಾನ್ಯ ವಿಷಯವಲ್ಲ. ಒಂದೇ ಹಾಸಿಗೆ ಮೇಲೆ ಹಲವರು ಮಲಗುವಂತಿಲ್ಲ. ಆದ್ರೆ ಏಷ್ಯಾದ ರಾಷ್ಟ್ರಗಳಲ್ಲಿ ಕೋ ಸ್ಲೀಪಿಂಗ್ ಈಗಲೂ ರೂಢಿಯಲ್ಲಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ನಿದ್ದೆಯನ್ನು ಖಾಸಗಿ ಕೆಲಸವೆಂದು ಪರಿಗಣಿಸಲಾಗುತ್ತದೆ. ಮನಸ್ಸು ಮತ್ತು ದೇಹಕ್ಕೆ ಬೇಕಾದ ವಿಶ್ರಾಂತಿಯನ್ನು ಪ್ರಶಾಂತವಾಗಿ ಯಾವುದೇ ತೊಂದರೆ ಇಲ್ಲದಂತೆ ಪಡೆಯಬೇಕು ಎಂಬ ಭಾವನೆ ಇದೆ.

ಆದ್ರೆ ನಾಯಿ, ಬೆಕ್ಕು ಅಥವಾ ಇನ್ಯಾವುದೇ ಪ್ರಾಣಿಯನ್ನು ಜೊತೆಗೆ ಮಲಗಿಸಿಕೊಂಡಲ್ಲಿ ನಿದ್ದೆಗೆ ಭಂಗ ಬರಬಹುದು. ಬೆಳೆದ ಮಕ್ಕಳಿಗೆ ನಿಮ್ಮ ಹಾಸಿಗೆಯಲ್ಲಿ ಜಾಗ ಮಾಡಿಕೊಟ್ರೂ ಇದೇ ಸ್ಥಿತಿ ಎದುರಾಗುತ್ತದೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಸಾಕು ಪ್ರಾಣಿಗಳು ಮತ್ತು ಬೆಳೆದ ಮಕ್ಕಳ ಜೊತೆಗೆ ನಿದ್ರಿಸುವುದು ಸೂಕ್ತವಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...