alex Certify ʼನೀರ್ ಕಜ್ಜಾಯʼ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನೀರ್ ಕಜ್ಜಾಯʼ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಬಿಸಿ ಬಿಸಿ ಕಜ್ಜಾಯವೆಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸರಿಯಾದ ಹದದಲ್ಲಿ ಮಾಡಿದರೆ ಮಾತ್ರ ಕಜ್ಜಾಯ ಚೆನ್ನಾಗಿ ಬರುತ್ತದೆ. ಆದರೆ ಈ ನೀರ್ ಕಜ್ಜಾಯ ಮಾಡುವುದಕ್ಕೆ ಅಷ್ಟೇನೋ ತಲೆಕೆಡಿಸಿಕೊಳ್ಳಬೇಕಿಲ್ಲ. ರುಚಿ ಕೂಡ ಸಖತ್ ಆಗಿರುತ್ತದೆ. ಮಾಡುವ ವಿಧಾನ ಇಲ್ಲಿದ ನೋಡಿ.

ಬೇಕಾಗುವ ಸಾಮಾಗ್ರಿಗಳು

2 ಲೋಟ ಅಕ್ಕಿ, 50- ಗ್ರಾಂ ಉದ್ದಿನಬೇಳೆ, 4 ಏಲಕ್ಕಿ, 1 ಕಪ್ ಬೆಲ್ಲ, ತೆಂಗಿನತುರಿ-1 ಕಪ್, ಕರಿಯಲು ಎಣ್ಣೆ.

ಮಾಡುವ ವಿಧಾನ:

ಮೊದಲಿಗೆ ಅಕ್ಕಿ, ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನೆಸಿಡಿ. ನಂತರ ಮಿಕ್ಸಿ ಜಾರಿಗೆ ಅಕ್ಕಿಯನ್ನು ಹಾಕಿಕೊಂಡು ರುಬ್ಬಿ. ಇದು ಸ್ವಲ್ಪ ನಯವಾದಾಗ ತೆಂಗಿನ ತುರಿ ಹಾಗೂ ಬೆಲ್ಲ, ಏಲಕ್ಕಿಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

ಈ ಹಿಟ್ಟು ದೋಸೆ ಹಿಟ್ಟಿನ ಹದಕ್ಕೆ ಇರಲಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕರಿಯಲು ಎಷ್ಟು ಬೇಕೋ ಅಷ್ಟು ಎಣ್ಣೆ ಹಾಕಿ. ಒಂದು ಚಿಕ್ಕ ಸೌಟಿನ ಸಹಾಯದಿಂದ ಈ ಹಿಟ್ಟನ್ನು ತೆಗೆದುಕೊಂಡು ಸ್ವಲ್ಪ ಸ್ವಲ್ಪವೇ ಎಣ್ಣೆ ಬಾಣಲೆಗೆ ಹಾಕಿದರೆ ರುಚಿಕರವಾದ ನೀರ್ ಕಜ್ಜಾಯ ರೆಡಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...