alex Certify ನಿಮ್ಮ ಮುದ್ದಿನ ನಾಯಿಗೆ ಮಾರಕವಾಗಬಹುದು ಈ ಆಹಾರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮುದ್ದಿನ ನಾಯಿಗೆ ಮಾರಕವಾಗಬಹುದು ಈ ಆಹಾರ…..!

ಹೆಚ್ಚಿನವರು ತಮ್ಮ ಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ. ಅವುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದರೆ ನಿಮ್ಮ ಮುದ್ದಿನ ನಾಯಿಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ನೀಡಬೇಡಿ. ಇದು ಅವುಗಳ ಜೀವಕ್ಕೆ ಅಪಾಯವನ್ನು ತರಬಹುದು.

ಸೇಬು: ನಾಯಿಗೆ ಸೇಬು ನೀಡಬೇಡಿ. ಯಾಕೆಂದರೆ ಸೇಬಿನಲ್ಲಿರುವ ಬೀಜಗಳು ನಾಯಿಗೆ ಹಾನಿಕಾರಕವಾಗಿದೆ. ಸೇಬಿನ ಬೀಜದಲ್ಲಿ ಸೈನೈಡ್ ಇದೆ. ಇದು ದೇಹದಲ್ಲಿ ಆಮ್ಲಜನಕದ ಕೊರತೆಯನ್ನುಂಟುಮಾಡುತ್ತದೆ.

ಕಾಫಿ : ನಾಯಿಗೆ ಕಾಫಿ ನೀಡಬೇಡಿ. ಇದರಲ್ಲಿ ಕೆಫೀನ್ ಇದೆ. ಇದು ನಾಯಿಗೆ ತುಂಬಾ ಅಪಾಯಕಾರಿ. ಇದು ನಾಯಿಯ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

ಬೆಳ್ಳುಳ್ಳಿ : ನಾಯಿಗೆ ಬೆಳ್ಳುಳ್ಳಿ ನೀಡಬೇಡಿ. ಇದು ಅವುಗಳ ಕೆಂಪು ರಕ್ತ ಕಣಗಳಿಗೆ ಹಾನಿಯನ್ನುಂಟುಮಾಡುತ್ತದೆ.

ಸಾಸಿವೆ : ಇದರಲ್ಲಿರುವ ಸಂಯುಕ್ತಗಳು ನಾಯಿಯ ಹೊಟ್ಟೆ ಊತಕ್ಕೆ ಕಾರಣವಾಗಬಹುದು. ಹಾಗಾಗಿ ಸಾಸಿವೆಯಿಂದ ತಯಾರಿಸಿದ ಆಹಾರವನ್ನು ನಾಯಿಗೆ ನೀಡಬೇಡಿ.

ಒಣದ್ರಾಕ್ಷಿ : ಒಣದ್ರಾಕ್ಷಿ ಮತ್ತು ದ್ರಾಕ್ಷಿ ನಾಯಿಯ ಕಿಡ್ನಿಯ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಹಾಗಾಗಿ ಇವುಗಳನ್ನು ನಾಯಿಗೆ ಆಹಾರವಾಗಿ ನೀಡಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...