alex Certify ನಿಮ್ಮ ಮನೆಯಲ್ಲೂ ಮಕ್ಕಳು ಸಿಲ್ಲಿ ಸಿಲ್ಲಿ ಪ್ರಶ್ನೆಗಳನ್ನು ಕೇಳುತ್ತಾರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮನೆಯಲ್ಲೂ ಮಕ್ಕಳು ಸಿಲ್ಲಿ ಸಿಲ್ಲಿ ಪ್ರಶ್ನೆಗಳನ್ನು ಕೇಳುತ್ತಾರಾ…?

ಮಕ್ಕಳು ಕೆಲವೊಮ್ಮೆ ಸೋಜಿಗದ ಪ್ರಶ್ನೆಗಳನ್ನು ಕೇಳುತ್ತಾರೆ. “ಅಮ್ಮ ನಾನು ಎಲ್ಲಿಂದ ಬಂದೆ” ಮತ್ತು “ಅವನು ಅಷ್ಟು ದಪ್ಪ ಯಾಕೆ ಇದ್ದಾನೆ” ಹೀಗೆ ಪ್ರಶ್ನೆಗಳನ್ನು ಮಾಡುತ್ತಲೇ ಇರುತ್ತಾರೆ. ಇಂಥ ಪ್ರಶ್ನೆಗಳಿಗೆ ನಾವು ಬಾಯಿ ಮುಚ್ಚಿಕೋ ಅನ್ನುವುದನ್ನು ಬಿಟ್ಟು ಈ ರೀತಿಯಾಗಿ ಉತ್ತರಿಸಬೇಕು.

* ಮಕ್ಕಳು ಇಂಥ ಪ್ರಶ್ನೆಗಳನ್ನು ಕೇಳಿದಾಗ ಎಂದಿಗೂ ಬಾಯಿ ಮುಚ್ಚಿಕೋ ಎಂದು ಹೇಳಬಾರದು. ಅದನ್ನು ಬಹುವಾಗಿ ವಿಶ್ಲೇಷಿಸಬೇಕಾದ ಅಗತ್ಯವೂ ಇಲ್ಲ. ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ಹೇಳಬೇಕು. ವೈಜ್ಞಾನಿಕವಾದುದನ್ನೇ ಹೇಳಬೇಕು. ಸುಳ್ಳು ಗಿಳ್ಳು ಹೇಳಿದರೆ ಅದು ಮುಂದೆ ನಾನಾ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.

* ಕೆಲವೊಮ್ಮೆ ಮಕ್ಕಳ ಪ್ರಶ್ನೆಗೆ ನಮಗೆ ಉತ್ತರ ಗೊತ್ತಿರುವುದಿಲ್ಲ. ಬಾಯಿ ಮುಚ್ಚಿ ಕುಳಿತು ಕೊಳ್ಳುತ್ತೀಯಾ ಎಂದು ಗದರುವ ಬದಲು ಇಬ್ಬರು ಸೇರಿ ಕಲಿತುಕೊಳ್ಳುವ ಎನ್ನಬೇಕು. ಅಂತ ಅನ್ವೇಷಣೆ ಮಗುವಿನ ಅರಿವು ದಾರಿಯನ್ನು ವಿಕಸಿಸುತ್ತದೆ.

* ಇಂಥ ಪ್ರಶ್ನೆ ಕೇಳಿದರೆ ಜಾಗ್ರತೆ ಎಂದು ಪ್ರಶ್ನಿಸಿದ ಮಕ್ಕಳ ಮೇಲೆ ಕೋಪಗೊಂಡರೆ ಅವರು ಮುಂದೆ ಪ್ರಶ್ನೆಗಳನ್ನು ಎತ್ತುವುದಿಲ್ಲ. ಇದು ಮಕ್ಕಳ ಜ್ಞಾನಾಭಿವೃದ್ಧಿಗೆ ಹಾನಿ ಮಾಡುತ್ತದೆ. ಒಂದು ವೇಳೆ ಕೆಲಸದ ಒತ್ತಡದಲ್ಲಿದ್ದರೂ, ಏನಾದರೂ ಹೇಳಿ ಕನಿಷ್ಠ ಆಮೇಲೆ ಪುರುಸೊತ್ತಿನಲ್ಲಿ ಹೇಳುತ್ತೇನೆ ಎಂದು ಹೇಳಬೇಕು.

* ಮಕ್ಕಳು ಬೆರಳೆತ್ತಿ ಮಾತನಾಡುವುದು ಸಹಜ. ಅಂತಹವರಿಗೆ ಬೆರಳೆತ್ತಿ ಮಾತನಾಡಿದರೆ ಅವರಿಗೆ ನೋವಾಗುತ್ತದೆ ಎಂಬುವುದನ್ನು ತಿಳಿಯ ಹೇಳಬೇಕು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...