alex Certify ನಿಮ್ಮ ಪ್ರಭಾವಳಿ ಶಕ್ತಿ ಹೆಚ್ಚಿಸಿ ಯಶಸ್ಸು ಪಡೆಯಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಪ್ರಭಾವಳಿ ಶಕ್ತಿ ಹೆಚ್ಚಿಸಿ ಯಶಸ್ಸು ಪಡೆಯಲು ಹೀಗೆ ಮಾಡಿ

ಪ್ರತಿಯೊಬ್ಬ ಮನುಷ್ಯನೊಳಗಿನ ಶಕ್ತಿ ಆತನ ಪ್ರಭಾವಳಿಯನ್ನೂ ಅವಲಂಭಿಸಿರುತ್ತದೆ. ಪ್ರಭಾವಳಿ ಅಥವಾ ಆರಾ ಎಂದರೆ ಮನುಷ್ಯನ ಸುತ್ತಲಿರುವ ಎನರ್ಜಿ ಫೀಲ್ಡ್. ಪ್ರಭಾವಳಿ ಶಕ್ತಿಯುತವಾಗಿದ್ದಷ್ಟು ಮನುಷ್ಯ ಅದ್ವಿತೀಯ ಸಾಧನೆಗಳನ್ನು ಮಾಡಬಹುದು ಎನ್ನಲಾಗುತ್ತದೆ. ಕೆಲವೊಮ್ಮೆ ಈ ಪ್ರಭಾವಳಿ ನೆಗೆಟೀವ್ ಮನಸ್ಥಿತಿಯ ಜನರು, ಋಣಾತ್ಮಕ ಪರಿಸ್ಥಿತಿಗಳ ನಡುವೆ ಒಟನಾಡ ನಡೆಸಿದಾಗ ಶಕ್ತಿ ಕುಂದುತ್ತದೆ. ಈ ಹಿನ್ನೆಲೆಯಲ್ಲಿ ಆಗಾಗ ನಮ್ಮ ಪ್ರಭಾವಳಿಯನ್ನು ಕ್ಲೆನ್ಸ್ ಮಾಡಿಕೊಳ್ಳುತ್ತಲೇ ಇರಬೇಕು. ಹಾಗಾದರೆ ಪ್ರಭಾವಳಿಯನ್ನು ಕ್ಲೆನ್ಸ್ ಮಾಡುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ.

ಸ್ನಾನ : ಉಪ್ಪು, ಮೂಲಿಕೆ ಮತ್ತು ಎಸೆನ್ಷಿಯಲ್​ ಆಯಿಲ್ ಸೇರಿಸಿದ ನೀರಿನಿಂದ ಸ್ನಾನ ಮಾಡುವುದು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಸ್ನಾನದ ನಂತರ ನಮಗೆ ಚೈತನ್ಯ ಉಂಟಾಗುವುದು ಇದೇ ಕಾರಣಕ್ಕೆ. ಲ್ಯಾವೆಂಡರ್ ಎಣ್ಣೆ, ಶ್ರೀಗಂಧ ಮತ್ತು ಹಿಮಾಲಯನ್ ಸಾಲ್ಟ್​ ಇದಕ್ಕೆ ಬಳಸಬಹುದು.

ಮೂಲಿಕೆ, ಧೂಪದ ನಡುವೆ ಕೂರುವುದು : ಮನೆಯಲ್ಲಿ ಮೂಲಿಕೆಭರಿತ ಊದುಗಡ್ಡಿ ಇಲ್ಲವೇ ಸಾಂಬ್ರಾಣಿ ಧೂಪ ಹಾಕುವುದು ಉತ್ತಮ. ಇವುಗಳ ನಡುವೆ ಕೆಲವು ಹೊತ್ತು ಕಳೆದಾಗ ನಮ್ಮ ಆರಾ ಕ್ಲೆನ್ಸ್​ ಆಗುವುದಲ್ಲದೇ ಶಕ್ತಿ ಹೆಚ್ಚಾಗುತ್ತದೆ.

ಸಮುದ್ರ ಸ್ನಾನ ಅಥವಾ ನದಿ ಸ್ನಾನ : ನಿಮ್ಮೊಳಗಿನ ನೆಗೆಟಿವಿಟಿ ಹೋಗಲು, ನಿಮ್ಮ ಪ್ರಭಾವಳಿ ಶಕ್ತಿಯುತವಾಗಲು ಸಮುದ್ರ ಸ್ನಾನ ಇಲ್ಲವೇ ನದಿ ನೀರಿನ ಸ್ನಾನ ಪ್ರಯೋಜನಕಾರಿ. ಇದರಿಂದ ನಿಮ್ಮ ಪ್ರಭಾವಳಿಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ.

ಧ್ಯಾನ : ಧ್ಯಾನ ಮಾಡುವಾಗ ನೀವು ನಿಮ್ಮ ಮೈಂಡ್​ಗೆ ಕಮ್ಯಾಂಡ್ ಕೊಡಬೇಕು. ನಿಮ್ಮ ಪ್ರಭಾವಳಿ ಕ್ಲೆನ್ಸ್ ಆಗುತ್ತಿದೆ, ಶುದ್ಧವಾಗುತ್ತಿದೆ ಎಂದು ಹೇಳುವ ಮೂಲಕ ಸಕಾರಾತ್ಮಕತೆಯನ್ನು ದ್ವಿಗುಣ ಮಾಡಿಕೊಳ್ಳಬಹುದು.

ಮಂತ್ರ ಪಠಣ ಅಥವಾ ಅಫರ್ಮೇಷನ್ಸ್ : ದೇವರ ನಾಮ ಸ್ಮರಣೆಯೂ ಕೂಡ ಪ್ರಭಾವಳಿ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನಲಾಗುತ್ತದೆ. ಜೊತೆಗೆ ನಿಮಗೆ ನೀವು ಒಳ್ಳೆಯದನ್ನೇ ಹೇಳಿಕೊಳ್ಳಿ ಇದನ್ನು ಅಫರ್ಮೇಷನ್ಸ್ ಎಂದು ಹೇಳಲಾಗುತ್ತದೆ. ಆ ಮೂಲಕ ನಿಮ್ಮ ಪ್ರಭಾವಳಿ ಸ್ಟ್ರಾಂಗ್ ಆಗುವುದಲ್ಲದೇ ನೆಮ್ಮದಿಯ ಬದುಕು ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...