alex Certify ನಿದ್ದೆಗೆ ಜಾರಿದ ಚಾಲಕನನ್ನು ಎಬ್ಬಿಸುತ್ತೆ ಈ ವಿಶೇಷ ಸಾಧನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿದ್ದೆಗೆ ಜಾರಿದ ಚಾಲಕನನ್ನು ಎಬ್ಬಿಸುತ್ತೆ ಈ ವಿಶೇಷ ಸಾಧನ…!

ದೂರದ ಊರಿಗೆ ಪ್ರಯಾಣ ಮಾಡುವುದು ಅಥವಾ ರಾತ್ರಿ ವೇಳೆ ಪ್ರಯಾಣ ಮಾಡುವುದು ಅಂದರೆ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕೂಡ ಕಡಿಮೆಯೇ.

ಆಯಾಸವಾಯ್ತು ಅಂತಾ ಕೊಂಚ ಕಣ್ಣು ನಿದ್ದೆಗೆ ಜಾರಿದರೂ ಸಹ ಮಾರಣಾಂತಿಕ ಅಪಘಾತಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಡ್ರೈವಿಂಗ್​ ಮಾಡುವಾಗ ನಿದ್ದೆಗೆ ಜಾರುವವರ ವಿರುದ್ಧ ಚಾಲಕರನ್ನು ಎಚ್ಚರಿಸಲು ನಾಗ್ಪುರದ ವ್ಯಕ್ತಿಯು ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನವನ್ನು ಧರಿಸಿದ ವ್ಯಕ್ತಿಯು ಚಾಲನೆ ಮಾಡುವಾಗ ನಿದ್ದೆಗೆ ಜಾರಿದರೆ ಚಾಲಕನನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತದೆ.

ಅನೇಕ ಕಾರು ತಯಾರಕರು ಕೂಡ ತಮ್ಮ ಕಾರುಗಳಲ್ಲಿ ಸ್ಲೀಪ್​ ಅಲರ್ಟ್​ ಸಿಸ್ಟಂನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ ಈ ವೈಶಿಷ್ಟ್ಯವು ಕೆಲವೇ ವಾಹನಗಳಲ್ಲಿ ಮಾತ್ರ ಲಭ್ಯವಿದೆ.

ನಾಗ್ಪುರ ಮೂಲದ ಚಾಲಕರೊಬ್ಬರು ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದು ಇದು ಚಾಲಕರು ನಿದ್ದೆಗೆ ಜಾರುತ್ತಿದ್ದಂತೆಯೇ ವೈಬ್ರೇಷನ್​ ಮಾಡುತ್ತಾ ಅಲಾರಂ ಸೌಂಡ್​ ಮಾಡುವ ಮೂಲಕ ಚಾಲಕರನ್ನು ಎಚ್ಚರಿಸುತ್ತದೆ.

ಈ ಸಾಧನವು 3.6 ವೋಲ್ಟ್​ ಬ್ಯಾಟರಿ ಹಾಗೂ ಆನ್​ & ಆಫ್​ ಸ್ವಿಚ್​​​ನ್ನು ಹೊಂದಿದೆ. ಚಾಲಕರು ವಾಹನ ಚಾಲನೆ ಮಾಡುವಾಗ ಕಿವಿಯ ಹಿಂದೆ ಧರಿಸಲಾಗುತ್ತದೆ.

ಚಾಲಕನ ತಲೆಯು ಸ್ಟೀರಿಂಗ್​ ಕಡೆಗೆ 30 ಡಿಗ್ರಿಯಷ್ಟು ವಾಲಿದಾಗ ಸಾಧನೆಯು ಎಚ್ಚರಿಕೆಯನ್ನು ನೀಡುತ್ತದೆ.

ಗೌರವ್​ ಸವ್ವಲಾಖೆ ಎಂಬ ಚಾಲಕ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಕೆಲ ಸಮಯದ ಹಿಂದೆ ಗೌರವ್​ ರಾತ್ರಿ ವೇಳೆ ವಾಹನ ಚಾಲನೆ ಮಾಡುತ್ತಿದ್ದಾಗ ನಿದ್ದೆಗೆ ಜಾರಿದ್ದಾರೆ. ಈ ಸಂದರ್ಭದಲ್ಲಿ ಇನ್ನೇನು ಅವರು ಮಾರಣಾಂತಿಕ ಅಪಘಾತಕ್ಕೀಡಾಗುವುದರಲ್ಲಿದ್ದರು.

ಆದರೆ ಅದೃಷ್ಟವಶಾತ್​ ಪಾರಾಗಿದ್ದರು. ಇದಾದ ಬಳಿಕ ಅವರು ಸಾಧನವನ್ನು ಕಂಡು ಹಿಡಿಯುವ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...