alex Certify ನಿತ್ಯ ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿತ್ಯ ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ….!

ಮೊಟ್ಟೆ ಅನೇಕರ ಫೇವರಿಟ್‌ ಫುಡ್‌. ಇದೊಂದು ಸಂಪೂರ್ಣ ಆಹಾರವಾಗಿರೋದ್ರಿಂದ ಆರೋಗ್ಯಕ್ಕೂ ಹೇಳಿ ಮಾಡಿಸಿದಂತಿರುತ್ತದೆ. ತಿನ್ನಲು ರುಚಿಕರ, ದೇಹಕ್ಕೆ ಪ್ರಯೋಜನಕಾರಿ. ಎಲ್ಲಾ ಅಗತ್ಯ ಪೋಷಕಾಂಶಗಳು ಮೊಟ್ಟೆಯಲ್ಲಿವೆ. ದೇಶ – ವಿದೇಶದಲ್ಲಿ ಮೊಟ್ಟೆಗಳು ಆಹಾರದ ಬಹುಮುಖ್ಯ  ಭಾಗವಾಗಿವೆ. ಉಪಹಾರಕ್ಕೆ ಹೆಚ್ಚಾಗಿ ಮೊಟ್ಟೆಗಳನ್ನು ಸೇವಿಸಲಾಗುತ್ತದೆ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಸಸ್ಯಾಹಾರಿ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ.

ಮೊಟ್ಟೆ, ಮಾಂಸಾಹಾರ ಅಥವಾ ಡೈರಿ ಉತ್ಪನ್ನವನ್ನು ತ್ಯಜಿಸುತ್ತಿದ್ದಾರೆ. ಆದರೆ ಮೊಟ್ಟೆಯನ್ನು ನಿಯಮಿತವಾಗಿ ಸೇವನೆ ಮಾಡುವವರು ಹಠಾತ್ತನೆ ಅದನ್ನು ನಿಲ್ಲಿಸಿದರೆ ಏನಾಗಬಹುದು ಅನ್ನೋದನ್ನು ತಿಳಿದುಕೊಳ್ಳಬೇಕು. ಮೊಟ್ಟೆಯನ್ನು ಹೆಚ್ಚು ತಿನ್ನುವವರು ಒಂದು ತಿಂಗಳು ಅದನ್ನು ಸೇವನೆ ಮಾಡದಿದ್ದರೆ ಏನಾಗುತ್ತದೆ ? ದೇಹದ ಮೇಲೆ ಅದರ ಪರಿಣಾಮವೇನು ಎಂಬುದನ್ನು ನೋಡೋಣ. ನಿತ್ಯದ ಆಹಾರದಿಂದ ಮೊಟ್ಟೆಗಳನ್ನು ತೆಗೆದುಹಾಕುವುದರಿಂದ ದೇಹದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ಮೊದಲನೆಯದಾಗಿ ಇದು ದೇಹದಲ್ಲಿ ಪೌಷ್ಟಿಕಾಂಶದ ಕೊರತೆಗೆ ಕಾರಣವಾಗಬಹುದು. ಮೊಟ್ಟೆಗಳು ಪ್ರೋಟೀನ್, ಅಮೈನೋ ಆಮ್ಲಗಳು, ಜೀವಸತ್ವಗಳು ಮತ್ತು ಕಬ್ಬಿಣದ ಉತ್ತಮ ಮೂಲವಾಗಿವೆ. ಮೊಟ್ಟೆ ಸೇವನೆಯನ್ನು ನಿಲ್ಲಿಸುವುದರಿಂದ ಸ್ನಾಯುಗಳ ನಿರ್ವಹಣೆ, ಆರೋಗ್ಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ವ್ಯಕ್ತಿ ದಿನನಿತ್ಯ ಮೊಟ್ಟೆಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ ಮತ್ತು ಅದನ್ನು ದಿಢೀರನೆ ಬಿಟ್ಟರೆ ಆಹಾರ ಸೇವಿಸಿದ ನಂತರವೂ ತೃಪ್ತಿ ಸಿಗುವುದಿಲ್ಲ. ಏನನ್ನೂ ತಿಂದಿಲ್ಲ ಎಂಬ ಭಾವನೆ ಮೂಡುತ್ತದೆ.

ಏಕೆಂದರೆ ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಇದ್ದು, ಇದನ್ನು ತಿಂದ ನಂತರ ಹೊಟ್ಟೆ ತುಂಬಿದಂತಾಗುತ್ತದೆ. ಮೊಟ್ಟೆಯಲ್ಲಿನ ಆಹಾರವು ಸಮತೋಲಿತ ಕೊಲೆಸ್ಟ್ರಾಲ್ ಅನ್ನು ಒಳಗೊಂಡಿರುವ ಕಾರಣ ಇದ್ದಕ್ಕಿದ್ದಂತೆ ಮೊಟ್ಟೆಯನ್ನು ಬಿಟ್ಟರೆ ಕೊಲೆಸ್ಟ್ರಾಲ್ ಮಟ್ಟಗಳು ಸಹ ಏರುಪೇರಾಗಬಹುದು. ಆದರೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಮೇಲೆ ಅದರ ಪರಿಣಾಮವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಮೊಟ್ಟೆಗಳನ್ನು ಬಿಟ್ಟರೆ, ದೇಹದಲ್ಲಿ ಸರಿಯಾದ ಪ್ರಮಾಣದ ಪ್ರೋಟೀನ್ ಪಡೆಯಲು ಬೀನ್ಸ್, ಮೀನುಗಳನ್ನು ತಿನ್ನಬೇಕು. ಮೊಟ್ಟೆಗಳನ್ನು ತಿನ್ನದಿದ್ದರೂ ಸಹ ಮಾಂಸ, ಮೀನು, ಬೀನ್ಸ್, ಧಾನ್ಯಗಳು, ತೋಫು ಮತ್ತು ನಟ್ಸ್‌ಗಳಂತಹ ಇತರ ಮೂಲಗಳಿಂದ ಪ್ರೋಟೀನ್ ಪಡೆಯಬಹುದು. ದೇಹದಲ್ಲಿ ಪ್ರೋಟೀನ್‌ನ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಉದಾಹರಣೆಗೆ ವಿಟಮಿನ್ ಡಿ, ಹಾಲು ಮತ್ತು ಸಾಲ್ಮನ್‌ನಂತಹ ಕೊಬ್ಬಿನ ಮೀನುಗಳಲ್ಲಿ ಕಂಡುಬರುತ್ತದೆ.

ವಿಟಮಿನ್ ಬಿ 12 ಮಾಂಸ, ಮೀನು ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಇದರೊಂದಿಗೆ, ಮಾಂಸ, ಚಿಕನ್‌ , ಮೀನು ಬೀನ್ಸ್ ಮತ್ತು ಬಲವರ್ಧಿತ ಧಾನ್ಯಗಳಲ್ಲಿ ಕಬ್ಬಿಣವು ಹೇರಳವಾಗಿ ಕಂಡುಬರುತ್ತದೆ. ಮೊಟ್ಟೆಗಳು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ರಂಜಕ, ವಿಟಮಿನ್ ಎ, ಬಿ, ಡಿ, ಇ ಮತ್ತು ಕಬ್ಬಿಣದಂತಹ ಜೀವಸತ್ವಗಳನ್ನು ಹೊಂದಿರುತ್ತವೆ. ಒಂದು ದೊಡ್ಡ ಮೊಟ್ಟೆಯು 6 ಗ್ರಾಂ ಪ್ರೋಟೀನ್ ಅನ್ನು ಒದಗಿಸುತ್ತದೆ.

ಅದು ಉತ್ತಮ-ಗುಣಮಟ್ಟದ ಪ್ರೋಟೀನ್ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ನಿಮ್ಮ ದೇಹಕ್ಕೆ ದಿನನಿತ್ಯದ ಅಗತ್ಯವಿರುವ ಎಲ್ಲಾ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಮೊಟ್ಟೆಗಳಲ್ಲಿ ಲುಟೀನ್ ಮತ್ತು ಝೀಕ್ಸಾಂಥಿನ್ ಇದ್ದು, ಇವು ಎಂಟಿಒಕ್ಸಿಡೆಂಟ್ ಆಗಿವೆ. ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯವನ್ನು ಕಡಿಮೆ ಮಾಡುತ್ತವೆ.

ಮೊಟ್ಟೆಗಳನ್ನು ತಿನ್ನುವುದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯಲ್ಲಿರುವ ಒಮೆಗಾ 3-ಕೊಬ್ಬಿನ ಆಮ್ಲಗಳು ಹೃದಯಕ್ಕೆ ಪ್ರಯೋಜನಕಾರಿ. ಅವು ಬೀಟೈನ್ ಮತ್ತು ಕೋಲಿನ್ ಅನ್ನು ಹೊಂದಿರುತ್ತವೆ, ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...