alex Certify ನಿಜವಾಗಿಯೂ ಏಲಿಯನ್ ಗಳು ಅಸ್ತಿತ್ವದಲ್ಲಿದೆಯೇ..? UFO ಫೋಟೋ ನೋಡಿ ನೆಟ್ಟಿಗರು ತಬ್ಬಿಬ್ಬು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಜವಾಗಿಯೂ ಏಲಿಯನ್ ಗಳು ಅಸ್ತಿತ್ವದಲ್ಲಿದೆಯೇ..? UFO ಫೋಟೋ ನೋಡಿ ನೆಟ್ಟಿಗರು ತಬ್ಬಿಬ್ಬು..!

ನೀವು ಬಾಹ್ಯಾಕಾಶ ಮತ್ತು ಯುಎಫ್ಒ ಉತ್ಸಾಹಿಗಳಾಗಿದ್ದೀರಾ..? ಯಾವಾಗಲೂ ಆಕರ್ಷಕ ಯುಎಫ್ಒ ಚಿತ್ರಗಳು ಮತ್ತು ವಿಡಿಯೋಗಳನ್ನು ಹುಡುಕುತ್ತಿದ್ದೀರಾ.. ? ಹಾಗಿದ್ರೆ ನಿಮಗಿದೋ ಗುಡ್ ನ್ಯೂಸ್.

ಸಂಶೋಧಕರು ಇದುವರೆಗೆ ತೆಗೆದ ಯುಎಫ್ಒ ಅತ್ಯುತ್ತಮ ಛಾಯಾಚಿತ್ರ ಎಂದು ಕರೆಯಲಾಗುವ ಹೊಸ ಹೈ-ರೆಸಲ್ಯೂಶನ್ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ವ್ಯಾಪಕವಾಗಿ ಶೇರ್ ಆಗುತ್ತಿದೆ.

ನೀವು ಚಿತ್ರವನ್ನು ಸ್ಪಷ್ಟವಾಗಿ ಗಮನಿಸಿದ್ರೆ, ಫೋಟೋದ ಎಡಭಾಗದಲ್ಲಿ ವಿಶಿಷ್ಟವಾದ ಹಾರುವ ವಸ್ತುವನ್ನು ಕಾಣಬಹುದು. ಆದರೆ, ಸೆರ್ಗಿಯೋ ಅಭಿವೃದ್ಧಿಪಡಿಸಿದ ಫೋಟೋದಲ್ಲಿ ವಸ್ತುವು ತುಂಬಾ ಸ್ಪಷ್ಟವಾಗಿಲ್ಲ.

ಮಾಧ್ಯಮ ವರದಿಗಳ ಪ್ರಕಾರ, ಈ ಫೋಟೋವನ್ನು 50 ವರ್ಷಗಳ ಹಿಂದೆ ನಕ್ಷೆ ತಯಾರಕ ಸೆರ್ಗಿಯೋ ಲೊಯಿಜಾ ಅವರು ತೆಗೆದಿದ್ದಾರೆ ಎನ್ನಲಾಗಿದೆ. ಅವರ ನಕ್ಷೆಯ ಸಮೀಕ್ಷೆಯ ಸಮಯದಲ್ಲಿ, ಅವರು 3,000 ಮೀಟರ್ ಎತ್ತರದಲ್ಲಿ ಲೇಕ್ ಕೋಟ್ ಮತ್ತು ಸುತ್ತಮುತ್ತಲಿನ ಮಳೆಕಾಡಿನ ನೂರಾರು ಕಪ್ಪು ಮತ್ತು ಬಿಳಿ ಫೋಟೋಗಳನ್ನು ತೆಗೆದಿದ್ದಾರೆ. ಅದರೊಂದಿಗೆ ಆಕಾಶದಲ್ಲಿ ಹಾರುವ ವಿಶಿಷ್ಟ ವಸ್ತುವನ್ನು ಸೆರೆಹಿಡಿಯಲಾಯಿತು.

ಲೋಯಿಜಾ ತನ್ನೆಲ್ಲಾ ಫೋಟೋಗಳನ್ನು ಅಭಿವೃದ್ಧಿಪಡಿಸಿದಾಗ ಯುಎಫ್ಒ ಗಮನಕ್ಕೆ ಬಂದಿದೆ. ಲೋಹದ ಡಿಸ್ಕ್ ಹೊಂದಿರುವ ಇದು ಏಕೈಕ ಚಿತ್ರವಾಗಿದೆ.

ಮಾಧ್ಯಮ ವರದಿ ಪ್ರಕಾರ, ಯುಎಫ್ಒ ಉತ್ಸಾಹಿ ಎಸ್ಟೆಬೆನ್ ಕ್ಯಾರಾಜನ್ ಮೂಲ ಚಿತ್ರದ ಸಂಪರ್ಕ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ. ಸೆರ್ಗಿಯೋ ಅವರು ತೆಗೆದಿದ್ದ ಈ ಫೋಟೋ ಮರೆತೇ ಹೋಗಿತ್ತು. ಆದರೆ, ಇದು 2021 ರಲ್ಲಿ ಮತ್ತೆ ಮರಳಿದೆ. ನಿಜವಾಗಿಯೂ ಅನ್ಯಗ್ರಹ ಜೀವಿಗಳು ಅಸ್ತಿತ್ವದಲ್ಲಿದೆಯೇ ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿದೆ.

— DaneG (@Dane__Garcia) May 8, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...