alex Certify ನಾ ನಿನ್ನ ಬಿಡಲಾರೆ, ಆಟೋ ರಾಜ ಚಿತ್ರದ ಖ್ಯಾತಿಯ ನಿರ್ಮಾಪಕ ಜಯರಾಮ್ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾ ನಿನ್ನ ಬಿಡಲಾರೆ, ಆಟೋ ರಾಜ ಚಿತ್ರದ ಖ್ಯಾತಿಯ ನಿರ್ಮಾಪಕ ಜಯರಾಮ್ ಇನ್ನಿಲ್ಲ

ಬೆಂಗಳೂರು: ‘ಆಟೋ ರಾಜ’, ‘ನಾ ನಿನ್ನ ಬಿಡಲಾರೆ’, ‘ಗಲಾಟೆ ಸಂಸಾರ’ದಂತಹ ಕನ್ನಡದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಹಿರಿಯ ನಿರ್ಮಾಪಕ ಸಿ.ಜಯರಾಮ್ ವಿಧಿವಶರಾಗಿದ್ದಾರೆ.

ಕನ್ನಡದ ಅನೇಕ ಸ್ಟಾರ್ ನಟರ ಚಿತ್ರಗಳಿಗೆ ಬಂಡವಾಳ ಹೂಡಿದ್ದ ಜಯರಾಮ್, ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರ ಅಂತ್ಯಕ್ರಿಯೆ ಇಂದು ಸುಮ್ಮನಹಳ್ಳಿ ರುದ್ರಭೂಮಿಯಲ್ಲಿ ನಡೆಯಲಿದೆ.

ಶಂಕರ್ ನಾಗ್ ಅಭಿನಯದ ಆಟೋ ರಾಜ, ಅನಂತ್ ನಾಗ್ ಅಭಿನಯದ ‘ನಾ ನಿನ್ನ ಬಿಡಲಾರೆ’, ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಅಭಿನಯದ ‘ಗಲಾಟೆ ಸಂಸಾರ’, ಶ್ರೀನಾಥ್-ಆರತಿ ಅಭಿನಯದ ‘ಪಾವನ ಗಂಗಾ’ ಮುಂತಾದ ಚಿತ್ರಗಳನ್ನು ಜಯರಾಮ್ ನಿರ್ಮಿಸಿದ್ದರು. ನಿರ್ಮಾಪಕ ಜಯರಾಮ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...