alex Certify ‘ನಾವು ಇದನ್ನೆಲ್ಲ ಎದುರಿಸುತ್ತೇವೆ ಹಾಗೂ ಗೆದ್ದೇ ಗೆಲ್ಲುತ್ತೇವೆ’: ವಿಶ್ವಾಸ ವ್ಯಕ್ತಪಡಿಸಿದ ಉಕ್ರೇನ್​ ವಿದೇಶಾಂಗ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾವು ಇದನ್ನೆಲ್ಲ ಎದುರಿಸುತ್ತೇವೆ ಹಾಗೂ ಗೆದ್ದೇ ಗೆಲ್ಲುತ್ತೇವೆ’: ವಿಶ್ವಾಸ ವ್ಯಕ್ತಪಡಿಸಿದ ಉಕ್ರೇನ್​ ವಿದೇಶಾಂಗ ಸಚಿವ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಕ್ರೇನ್​ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಉಕ್ರೇನ್​ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಹಾಗೂ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವ್ಲಾಡಿಮಿಟರ್​ ಪುಟಿನ್​​ ರಷ್ಯಾ ಹಾಗೂ ಉಕ್ರೇನ್​ ನಡುವೆ ಘರ್ಷಣೆ ನಡೆಯುವುದು ಅನಿವಾರ್ಯವಾಗಿದೆ. ಅಲ್ಲದೇ ಉಕ್ರೇನಿಯನ್​ ಸೇನಾ ಸದಸ್ಯರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗಬೇಕು ಎಂದು ಹೇಳಿದ್ದರು. ಅಲ್ಲದೇ ರಷ್ಯಾ ಕೈಗೊಂಡ ಕ್ರಮಗಳಲ್ಲಿ ಹಸ್ತಕ್ಷೇಪವನ್ನು ಮಾಡಲು ಬೇರೆ ಯಾವುದೇ ದೇಶಗಳು​ ಮುಂದಾದರೆ ಅವರು ಈ ಹಿಂದೆಂದೂ ನೋಡಿರದ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ವ್ಲಾಡಿಮಿರ್​ ಪುಟಿನ್​ ಉಕ್ರೇನ್​​ನ ವಿರುದ್ಧ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಕೈವ್​ ಹಾಗೆ ಖಾರ್ಕಿವ್​ ಪ್ರದೇಶಗಳಲ್ಲಿ ದೊಡ್ಡ ಮಟ್ಟದ ಸ್ಫೋಟವು ಉಂಟಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಟ್ವೀಟ್​ ಮಾಡಿದ ಉಕ್ರೇನ್​ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಪುಟಿನ್​ ಇದೀಗ ಉಕ್ರೇನ್​ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಆರಂಭಿಸಿದ್ದಾರೆ. ಶಾಂತಿಯುತವಾಗಿದ್ದ ಉಕ್ರೇನ್​ನ ನಗರಗಳು ಇದೀಗ ಅಪಾಯದಲ್ಲಿವೆ. ಇದೊಂದು ಆಕ್ರಮಣಕಾರಿ ಯುದ್ಧವಾಗಿದೆ. ಆದರೆ ಇವೆಲ್ಲದರಿಂದ ಉಕ್ರೇನ್​ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಹಾಗೂ ಗೆಲ್ಲುತ್ತದೆ. ಇಡೀ ವಿಶ್ವವು ಪುಟಿನ್​ರನ್ನು ತಡೆಹಿಡಿಯಬಹುದು ಹಾಗೂ ತಡೆಹಿಡಿಯಲೇಬೇಕು ಎಂದು ಕರೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...