alex Certify ನಾಳೆ ಬಿಡುಗಡೆಯಾಗಲಿದೆ ಶರಣ್ ನಟನೆಯ ‘ಗುರು ಶಿಷ್ಯರು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಬಿಡುಗಡೆಯಾಗಲಿದೆ ಶರಣ್ ನಟನೆಯ ‘ಗುರು ಶಿಷ್ಯರು’

ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಶರಣ್ ಅಭಿನಯದ ಬಹುನಿರೀಕ್ಷಿತ ‘ಗುರುಶಿಷ್ಯರು’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ನಟ ಶರಣ್ ಈ ಸಿನಿಮಾದಲ್ಲಿ ಖೋ ಖೋ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಅಭಿನಯಿಸಿದ್ದಾರೆ. ಶರಣ್ ಮಗ ಸೇರಿದಂತೆ ನೆನಪಿರಲಿ ಪ್ರೇಮ್ ಹಾಗು ನವೀನ್ ಕೃಷ್ಣ ಪುತ್ರರು ಈ ಸಿನಿಮಾದಲ್ಲಿ ಖೋ ಖೋ ಆಟಗಾರರಾಗಿ ನಟಿಸಿದ್ದಾರೆ.

ಸ್ಪೋರ್ಟ್ಸ್ ಹಾಗೂ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಲಡ್ಡು ಸಿನೆಮಾಸ್ ಹೌಸ್ ಲಾಂಛನದಲ್ಲಿ ಶರಣ್ ಹಾಗೂ ತರುಣ್ ಸುಧೀರ್ ನಿರ್ಮಾಣ ಮಾಡಿದ್ದು ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ. ಈಗಾಗಲೇ ಈ ಸಿನಿಮಾ ಹಾಡು ಹಾಗೂ ಟ್ರೈಲರ್ ಮೂಲಕ ಭರ್ಜರಿ ಸೌಂಡ್ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...