alex Certify ನಾಳೆ ಕೊಹ್ಲಿಯ 100 ನೇ ಟೆಸ್ಟ್; ಇಲ್ಲಿದೆ 99 ಪಂದ್ಯಗಳ ‘ವಿರಾಟ್’ ದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಕೊಹ್ಲಿಯ 100 ನೇ ಟೆಸ್ಟ್; ಇಲ್ಲಿದೆ 99 ಪಂದ್ಯಗಳ ‘ವಿರಾಟ್’ ದರ್ಶನ

2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯದಿಂದ ಟೆಸ್ಟ್ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಇಂದು ಬಹಳ ದೂರ ಸಾಗಿ ಬಂದಿದ್ದಾರೆ. ತನ್ನ ಚೊಚ್ಚಲ ಪಂದ್ಯದಲ್ಲಿ ಕೇವಲ 19 ರನ್ ಗಳಿಸಲಷ್ಟೇ ಅವರು ಶಕ್ತರಾಗಿದ್ದರು.

ಸುದೀರ್ಘ ದಶಕದ ಪಯಣದ ನಂತರ ಕೊಹ್ಲಿ ಇದೀಗ ಮಾರ್ಚ್ 4 ರಂದು ಮೊಹಾಲಿಯಲ್ಲಿ 100ನೇ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದ್ದಾರೆ. ಇದುವರೆಗಿನ ಅವರ ಟೆಸ್ಟ್ ಪಂದ್ಯದ ಮೆಲುಕು ಹಾಕೋಣ.

99 ಟೆಸ್ಟ್ ಪಂದ್ಯಗಳಲ್ಲಿ ಬಿಳಿ ಜೆರ್ಸಿ ಧರಿಸಿರುವ ಕೊಹ್ಲಿ, 50.39 ಸರಾಸರಿಯಲ್ಲಿ 7962 ರನ್ ಗಳಿಸಿದ್ದಾರೆ. ಕೊಹ್ಲಿ 68 ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ ಮತ್ತು 40 ಪಂದ್ಯಗಳನ್ನು ಗೆದ್ದಿದ್ದಾರೆ. ಅವರು 58.82 ರಷ್ಟು ಗೆಲುವಿನ ಶೇಕಡಾವಾರು ಹೊಂದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ ಮೊದಲ 10 ವರ್ಷಗಳಲ್ಲಿ, ಕೊಹ್ಲಿ ಸಿಡಿಸಿದಷ್ಟು ಶತಕಗಳನ್ನು ಯಾರೂ ಗಳಿಸಿಲ್ಲ. 2016ರಲ್ಲಿ 12 ಟೆಸ್ಟ್‌ಗಳಲ್ಲಿ 1215 ರನ್‌ ಸಿಡಿಸಿದ್ದು ಕೊಹ್ಲಿಯ ಅತ್ಯಂತ ಯಶಸ್ವಿ ವರ್ಷವಾಗಿದೆ.

2011-12ರ ಪ್ರವಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಅಂತಿಮ ಟೆಸ್ಟ್‌ನಲ್ಲಿ ಕಣಕ್ಕಿಳಿದಿತ್ತು. ಬಲಗೈ ಆಟಗಾರ ಮೊದಲ ಎರಡು ಟೆಸ್ಟ್‌ಗಳಲ್ಲಿ ಒಟ್ಟು ಕೇವಲ 43 ರನ್ ಗಳಿಸಿದ್ದರು. ಆದರೆ, ಅಡಿಲೇಡ್‌ನಲ್ಲಿ ಮತ್ತು ಅವರ ಟೆಸ್ಟ್ ವೃತ್ತಿಜೀವನದ 14ನೇ ಇನ್ನಿಂಗ್ಸ್‌ನಲ್ಲಿ, ಕೊಹ್ಲಿ ತಮ್ಮ ಮೊದಲ ಶತಕವನ್ನು ಸಿಡಿಸಿದ್ದರು.

ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಅವರಂತಹ ಆಟಗಾರರನ್ನು ಹೊಂದಿದ್ದ ಮಧ್ಯಮ ಕ್ರಮಾಂಕದಲ್ಲಿ ಅವರನ್ನು 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಗೆ ಇಳಿಸಲಾಯಿತು. ಕೊಹ್ಲಿ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಒಟ್ಟು 272 ರಲ್ಲಿ 116 ರನ್ ಗಳಿಸಿದರು.

2013-14ರ ಆಸ್ಟ್ರೇಲಿಯ ಪ್ರವಾಸದಲ್ಲಿ ಮೊದಲೆರಡು ಟೆಸ್ಟ್‌ಗಳಲ್ಲಿ ಸೋಲಿನ ರುಚಿ ಕಂಡ ಭಾರತ ಮೂರನೇ ಪಂದ್ಯಕ್ಕಾಗಿ ಮೆಲ್ಬೋರ್ನ್‌ಗೆ ಬಂದಿತ್ತು. ಮಿಚೆಲ್ ಜಾನ್ಸನ್, ರಯಾನ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಶೇನ್ ವ್ಯಾಟ್ಸನ್ ಮತ್ತು ನಾಥನ್ ಲಿಯಾನ್ ಅವರ ಮಾರಕ ದಾಳಿಯ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ 169 ರನ್ ಗಳಿಸಿದರು. ಅಲ್ಲದೆ ಅಜಿಂಕ್ಯ ರಹಾನೆ (147) ಅವರೊಂದಿಗೆ 262 ರನ್ ಗಳ ನಾಲ್ಕನೇ ವಿಕೆಟ್ ಜೊತೆಯಾಟವನ್ನು ಆಡಿದ್ದರು. ಹೀಗಾಗಿ ಪಂದ್ಯ ಟೈ ಆಯಿತು. ಇದೇ ಟೆಸ್ಟ್ ಸರಣಿ ನಂತರ ಧೋನಿ ಟೆಸ್ಟ್ ಮಾದರಿಯಿಂದ ನಿವೃತ್ತಿ ಘೋಷಿಸಿದ್ದರು.

235 – ಮುಂಬೈ 2016

ಐದು ಟೆಸ್ಟ್‌ಗಳ ಸರಣಿಯನ್ನು ಆಡಲು ಇಂಗ್ಲೆಂಡ್ 2016ರಲ್ಲಿ ಭಾರತಕ್ಕೆ ಬಂದಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ದ್ವಿಶತಕ ಸಿಡಿಸಿದ್ದರು.

ಬಲಗೈ ಆಟಗಾರ ಜೇಮ್ಸ್ ಆಂಡರ್ಸನ್, ಕ್ರಿಸ್ ವೋಕ್ಸ್, ಜೇಕ್ ಬಾಲ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ಅವರನ್ನು ದಂಡಿಸಿದ್ರು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 400 ರನ್ ಗಳಿಸಿತ್ತು. ಆದರೆ ಕೊಹ್ಲಿ ಅವರ 235 ರನ್‌ಗಳ ನೆರವಿನಿಂದ ಭಾರತ 631 ರನ್ ಗಳಿಸಿ ಪಂದ್ಯವನ್ನು ಇನ್ನಿಂಗ್ಸ್‌ನಿಂದ ಗೆದ್ದುಕೊಂಡಿತು.

254 – ಪುಣೆ 2019

2019 ರಲ್ಲಿ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸವು ವಿರಾಟ್ ಕೊಹ್ಲಿಗೆ ನಿರ್ಣಾಯಕವಾಗಿತ್ತು. ಭಾರತ ಮೊದಲು ಬ್ಯಾಟಿಂಗ್ ಮಾಡಿ 601 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಕೊಹ್ಲಿ 254 ರನ್ ಸಿಡಿಸಿದ್ದರು.

ಅತ್ಯುತ್ತಮ ಐದು-ಟೆಸ್ಟ್ ದಾಖಲೆಗಳು:

  1. ನಾಯಕನಾಗಿ ಕೊಹ್ಲಿಯು 20 ಟೆಸ್ಟ್ ಶತಕಗಳ ದಾಖಲೆಯನ್ನು ಹೊಂದಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮೊದಲ ಸ್ಥಾನದಲ್ಲಿ ಗ್ರೇಮ್ ಸ್ಮಿತ್ (25) ಇದ್ದಾರೆ.
  2. ಭಾರತದ ಮಾಜಿ ನಾಯಕನ ಚೊಚ್ಚಲ 27 ಶತಕಗಳು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗೆ ಮಾತ್ರ ಸಮನಾಗಿರುತ್ತದೆ. ಡೇವಿಡ್ ವಾರ್ನರ್, ಜೋ ರೂಟ್ ಮತ್ತು ಕೇನ್ ವಿಲಿಯಮ್ಸನ್‌ಗಿಂತ ಹೆಚ್ಚಾಗಿದೆ.
  3. ಕೊಹ್ಲಿ ನೇತೃತ್ವದ ಭಾರತ ತಂಡ ತವರಿನಲ್ಲಿ 24 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.
  4. ಭಾರತದ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಗೆಲುವು ದಾಖಲೆಯನ್ನೂ ಕೊಹ್ಲಿ ಹೊಂದಿದ್ದಾರೆ. ಕೊಹ್ಲಿ ನೇತೃತ್ವದ ಭಾರತ ತಂಡ 68 ಪಂದ್ಯಗಳಲ್ಲಿ 40 ಪಂದ್ಯಗಳನ್ನು ಗೆದ್ದಿದೆ.
  5. ಗ್ರೆಗ್ ಚಾಪೆಲ್ ನಂತರ ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ಅವಳಿ ಶತಕಗಳನ್ನು ಗಳಿಸಿದ ಎರಡನೇ ಕ್ರಿಕೆಟಿಗರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...