alex Certify ನಾಣ್ಯ ಕೂಡಿಟ್ಟು ಕೋಟ್ಯಾಧಿಪತಿಯಾದ ಯುವಕ; ಸಾವಿರ ಪಟ್ಟು ಹೆಚ್ಚಾಗಿದೆ ಒಂದೊಂದು ನಾಣ್ಯದ ಬೆಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಣ್ಯ ಕೂಡಿಟ್ಟು ಕೋಟ್ಯಾಧಿಪತಿಯಾದ ಯುವಕ; ಸಾವಿರ ಪಟ್ಟು ಹೆಚ್ಚಾಗಿದೆ ಒಂದೊಂದು ನಾಣ್ಯದ ಬೆಲೆ….!

ಎಷ್ಟೇ ಹಣ ಸಂಪಾದಿಸಿದರೂ ಅದನ್ನು ಉಳಿತಾಯ ಮಾಡದೇ ಇದ್ದರೆ ಯಾರೂ ಶ್ರೀಮಂತರಾಗಲು ಸಾಧ್ಯವಿಲ್ಲ. ಬ್ರಿಟನ್‌ನಲ್ಲೊಬ್ಬ ವ್ಯಕ್ತಿ ನಾಣ್ಯಗಳನ್ನು ಸಂಗ್ರಹಿಸಿ ಶ್ರೀಮಂತನಾಗಿದ್ದಾನೆ. ಈತ ಕಳೆದ ಹತ್ತು ವರ್ಷಗಳಿಂದ ನಾಣ್ಯಗಳನ್ನು ಕೂಡಿಡುತ್ತಿದ್ದ. ಇದೀಗ ಆ ನಾಣ್ಯಗಳಿಗೆ ಸಾವಿರ ಪಟ್ಟು ಹೆಚ್ಚಿನ ಬೆಲೆ ಬಂದಿದೆ. ಈತ ನಾಣ್ಯಗಳನ್ನು ಹುಂಡಿಗೆ ಹಾಕಿ ಇಡುತ್ತಿದ್ದ. ಮುಚ್ಚಳ ತೆಗೆಯಲು ಸಾಧ್ಯವಾಗದಂತಹ ಹುಂಡಿಯನ್ನು ಇಟ್ಟುಕೊಂಡು, ಆ ಹಣವನ್ನು ಖರ್ಚು ಮಾಡಿರಲಿಲ್ಲ.

ಹೀಗೆ ನಾಣ್ಯಗಳನ್ನೆಲ್ಲ ಸಂಗ್ರಹಿಸುತ್ತ ಸಾಕಷ್ಟು ಉಳಿತಾಯ ಮಾಡಿದ್ದಾನೆ. ಅಚ್ಚರಿಯ ಸಂಗತಿಯೆಂದರೆ ಮಾರುಕಟ್ಟೆಯಲ್ಲಿ ಯಾವುದೇ ಮೌಲ್ಯವಿಲ್ಲದ ಕೆಲವು ನಾಣ್ಯಗಳನ್ನು ಈತ ಕೂಡಿಟ್ಟಿದ್ದಾನೆ. ಆದರೆ ಆ ನಾಣ್ಯಗಳಲ್ಲಿ ಬಳಸಲಾದ ವಸ್ತುಗಳ ಬೆಲೆ ಹೆಚ್ಚಾಗಿದೆ. 10 ವರ್ಷಗಳ ನಂತರ ಆ ನಾಣ್ಯಗಳನ್ನು ಮಾರುಕಟ್ಟೆಯಲ್ಲಿ ಮಾರಲು ಹೋದಾಗ ಅವುಗಳಿಗೆ ಅಸಲಿಗಿಂತ ಸಾವಿರ ಪಟ್ಟು ಹೆಚ್ಚು ಬೆಲೆ ಸಿಕ್ಕಿದೆ.

ಮ್ಯಾಥ್ಯೂ ಎಂಬ ಈ 36 ವರ್ಷದ ವ್ಯಕ್ತಿ, ನಾಣ್ಯಗಳು ಇಷ್ಟೊಂದು ಬೆಲೆಬಾಳುತ್ತವೆ ಎಂಬುದನ್ನು ತಿಳಿದು ಶಾಕ್‌ ಆಗಿದ್ದ. ಮ್ಯಾಥ್ಯೂ ಕೆಲವೊಂದು ಅಪರೂಪದ ನಾಣ್ಯಗಳನ್ನು ಕೂಡ ಸಂಗ್ರಹಿಸಿ ಇಟ್ಟಿದ್ದ. ಈತ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ, ಕರೋನಾ ಸಮಯದಲ್ಲಿ ಅಂಗಡಿ ಮುಚ್ಚಿಹೋಗಿತ್ತು. ಆ ಸಮಯದಲ್ಲಿ ನಾಣ್ಯಗಳನ್ನೆಲ್ಲ ಮಾರಿಬಿಡುವ ಸ್ಥಿತಿ ಎದುರಾಗಿತ್ತು. ಆದರೀಗ ನಾಣ್ಯಗಳಿಗೆ ಚಿನ್ನದ ಬೆಲೆ ಬಂದಿದ್ದು, ಅದನ್ನು ಮ್ಯಾಥ್ಯೂ ಹರಾಜು ಹಾಕುತ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...