alex Certify ನಾಚಿಕೆಯಿಲ್ಲದೆ ವರದಕ್ಷಿಣೆಗೆ ವರನ ಬೇಡಿಕೆ; ಮಂಟಪದಲ್ಲೇ ವಧುವಿನೊಂದಿಗೆ ವಾಗ್ವಾದಕ್ಕಿಳಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಚಿಕೆಯಿಲ್ಲದೆ ವರದಕ್ಷಿಣೆಗೆ ವರನ ಬೇಡಿಕೆ; ಮಂಟಪದಲ್ಲೇ ವಧುವಿನೊಂದಿಗೆ ವಾಗ್ವಾದಕ್ಕಿಳಿದ ಭೂಪ…!

ವರದಕ್ಷಿಣೆ ಪಿಡುಗು ಭಾರತದಲ್ಲಿ ಈಗಲೂ ಜೀವಂತವಾಗಿದೆ. ಇದನ್ನು ತೊಡೆದು ಹಾಕಲು ಕಾನೂನಿದ್ದರೂ, ವರದಕ್ಷಿಣೆ ಎನ್ನುವ ಕಾನ್ಸೆಪ್ಟ್ ಜನರ ಮನಸ್ಸಿನಿಂದ ಇನ್ನು ದೂರವಾಗಿಲ್ಲ. ವರದಕ್ಷಿಣೆಗಾಗಿ ಈಗಲೂ ಕಿರುಕುಳ ಕೊಡುವ ನೀಚ ಮನಸ್ಸಿನ ವ್ಯಕ್ತಿಗಳಿರುವುದನ್ನ ಕಂಡಿದ್ದೇವೆ. ದಿನದಲ್ಲಿ ಇಂತಹ ಒಂದು ಪ್ರಕರಣವಾದ್ರು ಬೆಳಕಿಗೆ‌ ಬರುತ್ತದೆ.

ಸಧ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ವರದಕ್ಷಿಣೆ ನೀಡದಿದ್ದರೆ ಮದುವೆಯಾಗುವುದಿಲ್ಲ ಎಂದು ವರ ಹಠ ಹಿಡಿದು ಕುಳಿತಿದ್ದಾನೆ. ಪಕ್ಕದಲ್ಲಿ ಕುಳಿತ ವಧುವಿನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ವರದಕ್ಷಿಣೆ ಪಡೆಯೋದಿಲ್ಲಾ ಅಥವಾ ನೀಡುವುದಿಲ್ಲಾ ಎಂದು ಯಾರು ಹೇಳ್ತಾರೆ ? ಎಲ್ಲಾ ಕಡೆ ವರದಕ್ಷಿಣೆ ನೀಡ್ತಾರೆ ಆದ್ರೆ, ಈ ವಿಷಯ ಕೆಲವರಿಗೆ ಗೊತ್ತಾಗುವುದಿಲ್ಲ ಎಂದಿದ್ದಾನೆ.

ವರದಕ್ಷಿಣೆ ಪೂರ್ತಿಯಾಗಿ ನೀಡಿದ್ರೆ ಇಂತಹ ವಿಷಯಗಳು ಹೊರ ಬರುವುದಿಲ್ಲಾ, ಯಾವಾಗ ವರದಕ್ಷಿಣೆ ನೀಡುವುದಿಲ್ಲವೋ ಆಗಲೇ ಈ ಸಂಗತಿ ಬೆಳಕಿಗೆ ಬರುವುದು. ನನಗೆ ವರದಕ್ಷಿಣೆ ಸಿಗಲಿಲ್ಲಾ ಅದಕ್ಕೆ ನಿಮಗೆ ತಿಳಿದಿದೆ, ವರದಕ್ಷಿಣೆ ಸಿಕ್ಕಿದ್ದರೆ ನಿಮಗೆ ತಿಳಿಯುತ್ತಿರಲಿಲ್ಲ. ನನ್ನ ಡಿಮ್ಯಾಂಡ್ ಪೂರ್ತಿಯಾದರೆ ಮಾತ್ರ ಈ ಮದುವೆಯಾಗತ್ತೆ, ಇಲ್ಲ ಅಂದ್ರೆ ನಮ್ಮ ಬಾರಾತ್ ಸೇರಿ ಎಲ್ಲರು ಮನೆಗೆ ಹೋಗ್ತಿವಿ ಎಂದಿದ್ದಾನೆ‌.

BIG BREAKING: ಚುನಾವಣೋತ್ತರ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ

ವರದಕ್ಷಿಣೆ ಕೊಡಲು ಆಗದಿದ್ದರೆ, ತಮ್ಮ ಯೋಗ್ಯತೆ ತಕ್ಕ ಸಂಬಂಧ ಹುಡುಕಿಕೊಳ್ಳಬೇಕು. ಶ್ರೀಮಂತರು ಅಥವಾ ಸರ್ಕಾರಿ ನೌಕರಿ ಇರುವವರೇ ಇವರಿಗೆ ಬೇಕು, ಆದರೆ ವರದಕ್ಷಿಣೆ ನೀಡುವುದಿಲ್ಲಾ ಎಂಬ ವಿತಂಡ ವಾದ ವರನದು. ಇದಕ್ಕೆ ವಧು ಆಕ್ಷೇಪಿಸಿ, ನನ್ನ ತಂದೆ-ತಾಯಿ ಈಗಾಗಲೇ ಸಾಕಷ್ಟು ಹಣ ಕೊಟ್ಟಿದ್ದಾರೆ, ಒಂದು ಲಕ್ಷ ಬಾಕಿ ಅದನ್ನು ನೀಡುತ್ತಾರೆ ಎಂದಿದ್ದಾಳೆ.

ಆಕೆಯ ಮಾತಿಗೆ ಉತ್ತರಿಸಿದ ವರ, ಒಂದು ಲಕ್ಷ ಅಷ್ಟೇ ಅಲ್ಲಾ ಒಂದು ಚಿನ್ನದ ಸರ ಹಾಗೂ ಉಂಗುರ ಕೂಡ ನೀಡಬೇಕು ಎಂದಿದ್ದಾನೆ. ಆಗ ವಧು ಮುಂದೆ ಕೊಡುತ್ತಾರೆ ಎಂದಾಗ, ನನಗೆ ಈಗಲೇ ಬೇಕು ಎಂದಿದ್ದಾನೆ. ಮೊದಲೇ ಹೇಳಿದಂತೆ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಘಟನೆ ಬಿಹಾರದಲ್ಲಿ ನಡೆದಿದೆ ಎಂದು ವದರಿಯಾಗಿದೆ.

ವಿಡಿಯೋ ನೋಡಿದ ಹಲವರು ವರನಿಗೆ ಛೀಮಾರಿ ಹಾಕಿದ್ದಾರೆ, ನಿನ್ನ ಬಳಿ ಈಗ ಇರುವ ಸರ್ಕಾರಿ ನೌಕರಿ ಇನ್ಮುಂದೆ ಇರುವುದಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಹಲವರು ಇಂತಹವನೊಂದಿಗೆ ಯಾವ ಹೆಣ್ಣು ಸಂತೋಷವಾಗಿರುವುದಿಲ್ಲ ಎನ್ನುತ್ತಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...