alex Certify ನಾಗರಹಾವಿನ ಹಣೆಗೆ ಚುಂಬಿಸುವ ಹುಚ್ಚು ಸಾಹಸ; ಉರಗದ ಪ್ರತಿಕ್ರಿಯೆ ನೋಡಿ ಬೆಚ್ಚಿಬಿದ್ದಿದ್ದಾರೆ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗರಹಾವಿನ ಹಣೆಗೆ ಚುಂಬಿಸುವ ಹುಚ್ಚು ಸಾಹಸ; ಉರಗದ ಪ್ರತಿಕ್ರಿಯೆ ನೋಡಿ ಬೆಚ್ಚಿಬಿದ್ದಿದ್ದಾರೆ ಜನ…!

ಕೆಲವರು ಹಾವುಗಳ ಜೊತೆ ಸರಸವಾಡಲು ಹೋಗಿ ಅಪಾಯ ತಂದುಕೊಳ್ತಾರೆ. ಅಂಥದ್ದೇ ಮೈಜುಮ್ಮೆನ್ನಿಸುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ನೋಡಿದ್ರೆ ಎಂಥವರು ಕೂಡ ಭಯಬೀಳೋದ್ರಲ್ಲಿ ಅನುಮಾನವೇ ಇಲ್ಲ.

ಕರ್ನಾಟಕದಲ್ಲಿ ಸೆರೆಹಿಡಿದಿರುವ ವಿಡಿಯೋ ಇದು. ವ್ಯಕ್ತಿಯೊಬ್ಬ ಕೈಯ್ಯಲ್ಲಿ ನಾಗರಹಾವನ್ನು ಹಿಡಿದುಕೊಂಡು ಹುಚ್ಚಾಟ ಮಾಡಲು ಹೋಗಿ ಸಂಕಷ್ಟಕ್ಕೀಡಾಗಿದ್ದಾನೆ. ನಾಗರಹಾವು ಹೆಡೆಬಿಚ್ಚಿಕೊಂಡಿತ್ತು. ಅದನ್ನು ಕೈಯ್ಯಲ್ಲಿ ಹಿಡಿದಿದ್ದ ವ್ಯಕ್ತಿ ಅದರ ತಲೆಗೆ ಮುತ್ತಿಡಲು ಹೋಗಿದ್ದಾನೆ. ಆತ ಚುಂಬಿಸುತ್ತಿದ್ದಂತೆ ರೊಚ್ಚಿಗೆದ್ದ ನಾಗರಹಾವು ಆತನ ಬಾಯಿಗೇ ಹೊಡೆದಿದೆ. ಅದನ್ನು ನೋಡಿದ ಜನರು ಕೂಡ ದಿಗ್ಭ್ರಾಂತರಾಗಿದ್ದಾರೆ.

ಹಾವು ದಿಢೀರನೆ ಈ ರೀತಿ ಪ್ರತಿಕ್ರಿಯಿಸಬಹುದು ಅನ್ನೋ ಕಲ್ಪನೆ ಆತನಿಗಿರಲಿಲ್ಲ. ಕೆಲವೇ ಸೆಕೆಂಡ್‌ಗಳಲ್ಲಿ ಹಾವು ಇದ್ದಕ್ಕಿದ್ದಂತೆ ವ್ಯಕ್ತಿಯ ಮೇಲೆ ದಾಳಿ ಮಾಡಿದೆ. ಆತನ ಬಾಯಿಗೇ ಹಾವು ಕಚ್ಚಿದೆ. ಹೆದರಿದ ಆತ ತಕ್ಷಣವೇ ಹಾವನ್ನು ನೆಲಕ್ಕೆ ಹಾಕಿದ್ದಾನೆ. ಹಾವಿನ ಕೋಪ ನೋಡಿದ ಜನರು ಕೂಡ ಗಾಬರಿಗೊಂಡರು. ಅವರಲ್ಲಿ ಒಬ್ಬ ವ್ಯಕ್ತಿ ಹಾವಿನ ಹಿಂದೆ ಹೋಗಲು ಪ್ರಯತ್ನಿಸಿದ. ಆದರೆ ಆಕ್ರಮಣಕಾರಿ ಹಾವು ಆತನನ್ನು ಬೆದರಿಸಿದೆ.

ಹಾವಿಗೆ ಚುಂಬಿಸಿದ ವ್ಯಕ್ತಿಯನ್ನು ಉರಗ ರಕ್ಷಕ ಅಂತಾ ಹೇಳಲಾಗ್ತಿದೆ. ಆತ ಮನೆಗೆ ನುಗ್ಗಿದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಕೆಲಸ ಮಾಡುತ್ತಿದ್ದಾನೆ. ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರಿಂದ ಆತನ ಪ್ರಾಣ ಉಳಿದಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...