alex Certify ನಟರ ರೆಮ್ಯುನರೇಷನ್ ಹೆಚ್ಚಳಕ್ಕೆ ಕರಣ್ ಜೋಹಾರ್ ಬೇಸರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟರ ರೆಮ್ಯುನರೇಷನ್ ಹೆಚ್ಚಳಕ್ಕೆ ಕರಣ್ ಜೋಹಾರ್ ಬೇಸರ

ಕೊರೋನಾ, ಚಲನಚಿತ್ರೋದ್ಯಮಕ್ಕೆ – ವಿಶೇಷವಾಗಿ ವಿತರಕರಿಗೆ ನಷ್ಟದ ನಿಜವಾದ ಮುಖವನ್ನ‌ ಪರಿಚಯಿಸಿದೆ. ಸುಮಾರು 18 ತಿಂಗಳ ಕಾಲ ಚಲನಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಉದ್ಯಮದ ಹಲವಾರು ದಿನಗೂಲಿ ಕಾರ್ಮಿಕರು ಸಹ ಕೆಲಸ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ, ಹಲವಾರು ನಟರು ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ. ಕರಣ್ ಜೋಹರ್ ಈ ಬೆಳವಣಿಗೆಯನ್ನ ಅಪಾಯಕಾರಿ ಪ್ರವೃತ್ತಿ ಎಂದು ಗುರುತಿಸಿದ್ದಾರೆ.

ಶುಲ್ಕ ಏರಿಕೆ 10-20 ರಷ್ಟಿರದೆ, ಏಕಾಏಕಿ 100% ಏರಿಕೆಯಾಗಿದೆ. ಹೀಗೆ ನಟರು ತಮ್ಮ ಶುಲ್ಕವನ್ನು ಹೆಚ್ಚಿಸಿದ್ದರಿಂದ ಕರಣ್ ಜೋಹರ್ ಬೇಸರಗೊಂಡಿದ್ದಾರೆ ಫಿಲ್ಮ್ ಕಂಪ್ಯಾನಿಯನ್ ಜೊತೆಗಿನ ನಿರ್ಮಾಪಕರ ಇಂಟರ್ವ್ಯೂ ಒಂದರಲ್ಲಿ, ಕರಣ್ ಜೋಹರ್ ಈ ಬಗ್ಗೆ ಧ್ವನಿ‌ ಎತ್ತಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಕಿರಿಯ ನಟರು ತಮ್ಮ ಶುಲ್ಕವನ್ನು 100 ಪ್ರತಿಶತದಷ್ಟು ಹೆಚ್ಚಿಸಿದ್ದಾರೆ. ಕೆಲವು ನಟರಂತು ಶುಲ್ಕ ಹೆಚ್ಚಳಕ್ಕೆ ತಮ್ಮ ಹಿಂದಿನ ಚಲನಚಿತ್ರಗಳು ಓಡಲಿಲ್ಲ, ಕೆಲ ಚಿತ್ರಗಳು ಬಿಡುಗಡೆಯಾಗಿಲ್ಲ ಎಂಬ ಕಾರಣ ನೀಡುತ್ತಿದ್ದಾರೆ. ಸಿನಿಮಾ ಶೂಟಿಂಗ್‌ಗಳು ಸ್ಥಗಿತಗೊಂಡು ಸಿನಿಮಾ ಬಿಡುಗಡೆಗೆ ಅಡ್ಡಿಯಾಗುತ್ತಿದೆ, ಉದ್ಯಮವು ಲಾಭ ಗಳಿಸಲು ಹೆಣಗಾಡುತ್ತಿದೆ. ಇಂತಾ ಸಮಯದಲ್ಲಿ ಶುಲ್ಕ ಹೆಚ್ಚಳ ಸರಿಯಲ್ಲ ಎಂದಿರುವ ಕರಣ್ ಜೋಹಾರ್ ಬೇಸರ ಹೊರಹಾಕಿದ್ದಾರೆ.

BIG NEWS: ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ; ವಿದೇಶಿ ವಿದ್ಯಾರ್ಥಿನಿಗೆ ರೂಪಾಂತರಿ ವೈರಸ್

ಕರಣ್ ಜೋಹರ್ ಹೇಳಿಕೆಗೆ ರೀಮಾ ಕಾಗ್ತಿ, ಜೋಯಾ ಅಖ್ತರ್, ನಿಖಿಲ್ ಅಡ್ವಾಣಿ ಮತ್ತು ಸಮೀರ್ ನಾಯರ್ ಬೆಂಬಲ ಸೂಚಿಸಿ, ತಂತ್ರಜ್ಞರು ಅಥವಾ ಬರಹಗಾರರು ನಟರಿಗಿಂತ ಕಡಿಮೆ ಸಂಭಾವನೆ ಪಡೆಯುತ್ತಾರೆ, ಆದರೆ ನಟರ ಡಿಮ್ಯಾಂಡ್ ಗಳಿಗೆ ಅಂತ್ಯ ಕಾಣುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು‌.

ಬಾಕ್ಸಾಫೀಸ್‌ನಲ್ಲಿ ತಮ್ಮ ಬಲವನ್ನು ಸಾಬೀತುಪಡಿಸಲು ಇನ್ನೂ ಸಾಧ್ಯವಾಗಿಲ್ಲಾ, ಆದರು ಯಾವುದೇ ಕಾರಣವಿಲ್ಲದೆ 20-30 ಕೋಟಿ ರೂ. ಕೇಳುತ್ತಿದ್ದಾರೆ. ನಿಜವಾಗಿ ಚಲನಚಿತ್ರವನ್ನು ವಿಶೇಷವಾಗಿಸುವ ತಾಂತ್ರಿಕ ಸಿಬ್ಬಂದಿಗೆ ನಾನು ಉನ್ನತ ಪಾವತಿ ನೀಡಲು ಬಯಸುತ್ತೇನೆ. ಕೇವಲ ನಟರಿಗೆ ಏಕೆ 15 ಕೋಟಿ ರೂಪಾಯಿಗಳನ್ನು ಪಾವತಿಸಬೇಕು? ಎಂದು ಕೇಳಿದ್ದಾರೆ. ಕೆಲವು ಟಾಪ್ ನಟರು ಒಂದು ಚಿತ್ರಕ್ಕೆ ನೂರು ಕೋಟಿಗಿಂತ ಹೆಚ್ಚು ಶುಲ್ಕ ಕೇಳುತ್ತಿದ್ದರೆ ಅವ್ರನ್ನ ನೋಡಿ ಯುವ ನಟರು ಹೀಗೆ ಮಾಡುತ್ತಿದ್ದಾರೆ ಎಂಬುದು ನಿರ್ಮಾಪಕರ ಅಭಿಪ್ರಾಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...