alex Certify ನಟನಿಗೆ ʼಗೆಟ್‌ ಔಟ್‌ʼ ಎಂದ ​ಸುದ್ದಿ ನಿರೂಪಕಿ​: ನೆಟ್ಟಿಗರಿಂದ ಆಕ್ರೋಶ….!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟನಿಗೆ ʼಗೆಟ್‌ ಔಟ್‌ʼ ಎಂದ ​ಸುದ್ದಿ ನಿರೂಪಕಿ​: ನೆಟ್ಟಿಗರಿಂದ ಆಕ್ರೋಶ….!!

ಖಾಸಗಿ ಸುದ್ದಿ ವಾಹಿನಿಯ ನಿರೂಪಕರೊಬ್ಬರು ತೆಲುಗು ನಟ ವಿಶ್ವಕ್​​ ಸೇನ್​​ರನ್ನು ಸ್ಟುಡಿಯೋದಿಂದ ಹೊರ ನಡೆಯುವಂತೆ ತಾಕೀತು ಮಾಡಿರುವ ವಿಡಿಯೋ ವೈರಲ್​ ಆಗಿದೆ. ಆದರೆ ಪತ್ರಕರ್ತೆಯ ಆಕ್ರೋಶ ಹಾಗೂ ಸೇನ್​ರನ್ನು ಸ್ಟುಡಿಯೋದಿಂದ ಹೊರ ಹಾಕಿದ ರೀತಿ ನೆಟ್ಟಿಗರಿಗೆ ಸಮಾಧಾನ ತಂದಂತೆ ಕಾಣಲಿಲ್ಲ.
ಈ ವಿಡಿಯೋದಲ್ಲಿ ನಟ ವಿಶ್ವಕ್​ ಸೇನ್​ ಆ್ಯಂಕರ್​ ಬಳಿ, ನಿಮಗೆ ವೈಯಕ್ತಿಕವಾಗಿ ನನ್ನ ಮೇಲೆ ಆಕ್ರಮಣ ಮಾಡುವ ಹಕ್ಕಿಲ್ಲ. ನೀವು ನನ್ನನ್ನು ಖಿನ್ನತೆಗೆ ಒಳಗಾದ ವ್ಯಕ್ತಿ ಅಥವಾ ಪಾಗಲ್​ ಸೇನ್​ ಎಂದು ಕರೆಯಬೇಡಿ. ತಿಳಿಯಿತಾ..? ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಆ್ಯಂಕರ್​, ನೀವು ನನ್ನ ಸ್ಟುಡಿಯೋದಿಂದ ಹೊರ ನಡೆಯಿರಿ ಎಂದು ಪದೇ ಪದೇ ಹೇಳಿದ್ದಾರೆ.

ಇದಕ್ಕೆ ಅವಾಚ್ಯ ಶಬ್ದ ಬಳಕೆ ಮಾಡಿದ ಸೇನ್​ ನೀವೇ ತಾನೆ ನನ್ನನ್ನು ಕರೆಯಿಸಿದ್ದು ಎಂದು ಹೇಳಿದ್ದಾರೆ. ಹಾಗೂ ಇಯರ್​ ಫೋನ್​ಗಳನ್ನು ಕಳಚಿ ಕುರ್ಚಿಯಿಂದ ಕೆಳಗಿಳಿಯುವ ವೇಳೆಯಲ್ಲಿ ಆಕ್ರೋಶದಲ್ಲಿದ್ದ ನಿರೂಪಕಿಯು ಗೆಟ್​ ಲಾಸ್ಟ್​ ಎಂದು ಕಿರುಚಿದ್ದಾರೆ.

ಆದರೆ ನಿರೂಪಕಿ ವರ್ತಿಸಿದ ರೀತಿಯು ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ. ಆ್ಯಂಕರ್​ ಅತಿಯಾದ ಸೊಕ್ಕನ್ನು ಹೊಂದಿದ್ದಾರೆ. ಇಂತಹ ವೃತ್ತಿಪರವಲ್ಲದ ಆ್ಯಂಕರ್​ಗಳು ಪತ್ರಿಕೋದ್ಯಮಕ್ಕೆ ಒಂದು ಕಪ್ಪು ಚುಕ್ಕೆ ಎಂದು ನೆಟ್ಟಿಗರು ಅಭಿಪ್ರಾಯ ಹೊರ ಹಾಕಿದ್ದಾರೆ.

— MIRCHI9 (@Mirchi9) May 2, 2022

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...