alex Certify ದೇಹದ ಬೊಜ್ಜು ಕರಗಿಸಲು ಹೋಗಿ ಈ ತಪ್ಪು ಮಾಡಿದ್ರೆ, ಅನಾರೋಗ್ಯಕ್ಕೆ ತುತ್ತಾಗುತ್ತೀರಿ ಎಚ್ಚರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದ ಬೊಜ್ಜು ಕರಗಿಸಲು ಹೋಗಿ ಈ ತಪ್ಪು ಮಾಡಿದ್ರೆ, ಅನಾರೋಗ್ಯಕ್ಕೆ ತುತ್ತಾಗುತ್ತೀರಿ ಎಚ್ಚರ…..!

ಬೊಜ್ಜು ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಇದರಿಂದ ತೂಕ ಹೆಚ್ಚಳವಾಗುತ್ತದೆ. ಈ ಬೊಜ್ಜನ್ನು ಕರಗಿಸಲು ಜನರು ಹರಸಾಹಸ ಮಾಡುತ್ತಾರೆ. ಆದರೆ ಅವರು ಬೊಜ್ಜು ಕರಗಿಸಲು ಮಾಡುವ ಕೆಲವೊಂದು ತಪ್ಪುಗಳು ಅವರ ದೇಹದ ಮೇಲೆ ಪರಿಣಾಮ ಬೀರುತ್ತದೆ.

*ಕ್ಯಾಲೋರಿ : ತೂಕ ಇಳಿಸಲು ಕೆಲವರು ಕ್ಯಾಲೋರಿ ಆಹಾರಗಳನ್ನು ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

*ಕೊಬ್ಬು : ದೇಹದ ಆರೋಗ್ಯಕ್ಕೆ ಕನಿಷ್ಟ ಪ್ರಮಾಣದ ಕೊಬ್ಬು ಅಗತ್ಯ. ಆದರೆ ದೇಹದಲ್ಲಿ ಬೊಜ್ಜು ಬೆಳೆಯಲು ಪ್ರಮುಖ ಕಾರಣ ಕೊಬ್ಬು. ಹಾಗಾಗಿ ಕೆಲವರು ಬೊಜ್ಜನ್ನು ಕಡಿಮೆ ಮಾಡಲು ಕೊಬ್ಬಿನ ಆಹಾರದಿಂದ ದೂರವಿರುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆ ಕಾಡಬಹುದು.

*ಕೆಲವರು ಬೊಜ್ಜನ್ನು ಕರಗಿಸಲು ಆಹಾರವನ್ನು ಸೇವಿಸುವುದನ್ನು ತಪ್ಪಿಸುತ್ತಾರೆ. ಇದರಿಂದ ದೇಹಕ್ಕೆ ಪೋಷಕಾಂಶಗಳ ಕೊರತೆಯಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು.

*ಬೊಜ್ಜು ಕಡಿಮೆ ಮಾಡಲು ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳು ಒಂದು ಉತ್ತಮ ಮಾರ್ಗ. ಆದರೆ ಕೆಲವರು ಬೊಜ್ಜು ಕರಗಿಸಲು ಅತಿಯಾಗಿ ವ್ಯಾಯಾಮ ಹಾಗೂ ದೈಹಿಕ ಚಟುವಟಿಕೆಗಳನ್ನು ಮಾಡುತ್ತಾರೆ. ಇದರಿಂದ ದೇಹ ಶಕ್ತಿ ಕಳೆದುಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...