alex Certify ದೇವರ ಮೂರ್ತಿ ಮೇಲೆ ಕಾಲಿಟ್ಟು ಅಭಿಷೇಕ ಮಾಡಿದ್ದ ಅರ್ಚಕನಿಂದ ಕ್ಷಮೆಯಾಚನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವರ ಮೂರ್ತಿ ಮೇಲೆ ಕಾಲಿಟ್ಟು ಅಭಿಷೇಕ ಮಾಡಿದ್ದ ಅರ್ಚಕನಿಂದ ಕ್ಷಮೆಯಾಚನೆ…!

ದೇವರ ಮೂರ್ತಿ ಮೇಲೆ ಕಾಲಿಟ್ಟು ಅಭಿಷೇಕ ಮಾಡುತ್ತಿರುವ ಅರ್ಚಕರೊಬ್ಬರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿ ಶಾಕ್ ಆಗಿದ್ದ ಭಕ್ತರು, ಅರ್ಚಕರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು.

ಈ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಬಳ್ಳೂರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿತ್ತು ಎಂದು ಹೇಳಲಾಗಿದ್ದು, ಅರ್ಚಕ ಮಹೇಶ್ವರಯ್ಯ ಸ್ವಾಮಿ ದೇವರ ಮೂರ್ತಿಯ ತಲೆ ಮೇಲೆ ತಮ್ಮ ಕಾಲಿಟ್ಟಿದ್ದರೆ, ಸಹಾಯಕ ಇವರ ಕಾಲಿಗೆ ನೀರು ಹಾಕಿದ್ದ. ಈ ರೀತಿ ಅಭಿಷೇಕ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು.

ಇದೀಗ ಅರ್ಚಕ ಮಹೇಶ್ವರಯ್ಯ ಸ್ವಾಮಿ ತಮ್ಮ ಈ ಕೃತ್ಯಕ್ಕೆ ಕ್ಷಮೆ ಯಾಚಿಸಿದ್ದು, ಈ ಹಿಂದೆ ಆ ರೀತಿಯ ಸಂಪ್ರದಾಯ ಇತ್ತು. ಅದನ್ನು ಈಗ ನಿಲ್ಲಿಸಲಾಗಿದೆ. ಆದರೂ ಕೂಡ ನನ್ನಿಂದ ತಪ್ಪಾಗಿದ್ದು ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...