alex Certify ದೇಗುಲದಲ್ಲಿ ಪ್ರಾರ್ಥನೆ ಮಾಡಿದ್ರಾ ಕ್ರಿಶ್ಚಿಯನ್ನರು..? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಗುಲದಲ್ಲಿ ಪ್ರಾರ್ಥನೆ ಮಾಡಿದ್ರಾ ಕ್ರಿಶ್ಚಿಯನ್ನರು..? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ದೇವಸ್ಥಾನವೊಂದರಲ್ಲಿ ಕ್ರಿಶ್ಚಿಯನ್ ಸಮುದಾಯ ಪ್ರಾರ್ಥನೆ ನಡೆಸುತ್ತಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ. ಆಂಧ್ರಪ್ರದೇಶದ ಗಂಗವರಂ ಗ್ರಾಮದ ದೇಗುಲದಲ್ಲಿ ಈ ಹೊಸ ವಿವಾದ ಹುಟ್ಟಿಕೊಂಡಿದೆ.

ದೇವಸ್ಥಾನದಲ್ಲಿ ಕ್ರಿಶ್ಚಿಯನ್ ಮಿಷನರಿ ಗುಂಪುಗಳು ಪ್ರಾರ್ಥನೆ ನಡೆಸುತ್ತಿರುವ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ, ಆಂಧ್ರ ಪೊಲೀಸರು ಇದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ದೇವಾಲಯದ ಪಕ್ಕದ ರಸ್ತೆಯಲ್ಲಿ ನಿವಾಸಿಯೊಬ್ಬರು ಕ್ರಿಶ್ಚಿಯನ್ ಪ್ರಾರ್ಥನೆಗಳನ್ನು ನಡೆಸುತ್ತಿದ್ದರು. ದೇವಾಲಯದ ಆವರಣದಲ್ಲಿ ಯಾವುದೇ ಪ್ರಾರ್ಥನೆಗಳು ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೇವಾಲಯದ ಪಕ್ಕದಲ್ಲಿರುವ ತನ್ನ ಮನೆಯ ಮುಂಭಾಗದಲ್ಲಿರುವ ರಸ್ತೆಯಲ್ಲಿ ನಿವಾಸಿ ಮಂಗಾಯಮ್ಮ ಕ್ರಿಶ್ಚಿಯನ್ ಪ್ರಾರ್ಥನೆಗಳನ್ನು ನಡೆಸುತ್ತಿದ್ದಾರೆ. ರಾಮಮಂದಿರದಲ್ಲಿ ಪ್ರತಿನಿತ್ಯ ಪೂಜೆಗಳು ನಡೆಯುತ್ತವೆ ಮತ್ತು ಯಾವುದೇ ವಿವಾದಗಳಿಲ್ಲ. ಎರಡೂ ಸಮುದಾಯಗಳು ಪರಸ್ಪರ ಸೌಹಾರ್ದಯುತ ಸಂಬಂಧವನ್ನು ಹೊಂದಿವೆ ಎಂದು ಪೂರ್ವ ಗೋದಾವರಿ ಎಸ್ಪಿ ಎಂ. ರವೀಂದ್ರನಾಥ್ ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ 30 ರಂದು ಪ್ರಾರ್ಥನೆ ನಡೆಯುತ್ತಿದ್ದಾಗ, ಮಂಗಾಯಮ್ಮ ಅವರ ಹಿರಿಯ ಮಗ ಶ್ರೀನಿವಾಸ್ ಪ್ರಾರ್ಥನೆ ನಡೆಸಲು ಅಪಾರ ಪ್ರಮಾಣದ ಹಣವನ್ನು ಖರ್ಚು ಮಾಡುವ ಬಗ್ಗೆ ಆಕೆಯೊಂದಿಗೆ ಜಗಳವಾಡಿದ್ದ. ಶ್ರೀನಿವಾಸ್ ತನ್ನ ತಾಯಿಯೊಂದಿಗೆ ಜಗಳವಾಡಿರೋ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ವಿವಾದವನ್ನು ಬಗೆಹರಿಸಿದ್ದಾರೆ.

ಆದರೆ ಶ್ರೀನಿವಾಸ್ ಅವರ ಸೋದರಸಂಬಂಧಿ ವೆಂಕಟರಮಣ ಎಂಬಾತ ಧಾರ್ಮಿಕ ದ್ವೇಷವನ್ನು ಕೆರಳಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ್ದಾನೆ. ರಾಮ ಮಂದಿರದಲ್ಲಿ ಯೇಸುಕ್ರಿಸ್ತನ ಬೋಧನೆ ನಡೆದಿದೆ ಎಂದು ಸುಳ್ಳು ಸುದ್ದಿಯನ್ನು ಬಿತ್ತರಿಸಲಾಗಿದೆ.

— Vishnu Vardhan Reddy (@SVishnuReddy) April 1, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...