alex Certify ದುಬಾರಿ ಮೇಕ್ ಅಪ್ ಕಿಟ್ ಕಳುವು; ಪೊಲೀಸರಿಗೆ ದೂರು ನೀಡಿದ ಟಾಲಿವುಡ್ ನಟ ವಿಷ್ಣು ಮಂಚು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬಾರಿ ಮೇಕ್ ಅಪ್ ಕಿಟ್ ಕಳುವು; ಪೊಲೀಸರಿಗೆ ದೂರು ನೀಡಿದ ಟಾಲಿವುಡ್ ನಟ ವಿಷ್ಣು ಮಂಚು…!

ಟಾಲಿವುಡ್ ನಟ ಹಾಗೂ ಎಂಎಎ ಅಧ್ಯಕ್ಷ ವಿಷ್ಣು ಮಂಚು ತಮ್ಮ ದುಬಾರಿ ಮೇಕ್ಅಪ್ ಹಾಗೂ ಕೇಶವಿನ್ಯಾಸದ ಕಿಟ್ ಕಳುವಾಗಿದೆ ಎಂದು ಪೊಲೀಸ್ ಕಂಪ್ಲೆಂಟ್ ನೀಡಿದ್ದಾರೆ. ನಟ ತನ್ನ ಹೈದರಾಬಾದ್ ನಗರದ ಸಿಬಿಐ ಕಾಲೋನಿಯಲ್ಲಿರುವ ಮನೆಯಿಂದ ಐದು ಲಕ್ಷ ಬೆಲೆ ಬಾಳುವ ಮೇಕ್ಅಪ್ ಕಿಟ್ ಕಳುವಾಗಿದೆ ಎಂದು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಧ್ಯ‌ ಜುಬ್ಲಿ ಹಿಲ್ಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ದುಬಾರಿ ಮೇಕಪ್ ಕಿಟ್ ಅನ್ನು ಕಳವು ಮಾಡಲಾಗಿದೆ. ವಿಷ್ಣು ಅವರಿಂದ ದೂರನ್ನು ಸ್ವೀಕರಿಸಿದ ನಂತರ ನಾವು ದರೋಡೆ ಅಪರಾಧದ ಸೆಕ್ಷನ್ 390 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಪ್ರಸ್ತುತ ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಪ್ರಕರಣ ಭೇದಿಸುತ್ತೇವೆ ಎಂದು ಎಸ್‌ಐ ಲಕ್ಷ್ಮಿ ನಾರಾಯಣನ್ ಮಾಹಿತಿ ನೀಡಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದಿಂದ ಮದ್ಯ ಪ್ರಿಯರಿಗೆ ಶಾಕ್; ಬಿಯರ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ…!

ಆರಂಭದಲ್ಲಿ ಎಂಎಎ ಕಚೇರಿಯಲ್ಲಿ ದರೋಡೆ ನಡೆದಿದೆ ಎಂದು ಊಹಿಸಲಾಗಿತ್ತು. ಆದರೆ ಪೊಲೀಸರು ಈ ವದಂತಿಗಳನ್ನು ತಳ್ಳಿಹಾಕಿದ್ದು, ಎಂಎಎ ಕಚೇರಿಯಲ್ಲಿ ದರೋಡೆ ನಡೆದಿದೆ ಎಂಬ ವರದಿಗಳು ಸಂಪೂರ್ಣ ಸುಳ್ಳು. ದೂರಿನ ಪ್ರಕಾರ, ಸಿಬಿಐ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಕಳ್ಳತನ ನಡೆದಿದೆ. ಫಿಲ್ಮ್ ನಗರದಲ್ಲಿರುವ ಎಂಎಎ ಕಚೇರಿಯಲ್ಲಿ ದರೋಡೆ ನಡೆದಿರುವ ಬಗ್ಗೆ ಯಾವುದೇ ವರದಿ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ದರೋಡೆಗೆ ಸಂಬಂಧಿಸಿದಂತೆ ವಿಷ್ಣು ಮಂಚು ಯಾವುದೇ ಹೇಳಿಕೆ ನೀಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...