alex Certify ದೀರ್ಘಕಾಲದ ಸುಖಮಯ ದಾಂಪತ್ಯಕ್ಕೆ ಇಲ್ಲಿವೆ ಕೆಲ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀರ್ಘಕಾಲದ ಸುಖಮಯ ದಾಂಪತ್ಯಕ್ಕೆ ಇಲ್ಲಿವೆ ಕೆಲ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಹುಡುಗಾಟಿಕೆಯಂತಾಗಿದೆ. ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ವಿಚ್ಛೇದನ, ಪತಿ-ಪತ್ನಿಯಲ್ಲಿ ವಿರಸ, ಮನೆಯವರೊಂದಿಗೆ ವೈಮನಸ್ಸು ಇವೆಲ್ಲವೂ ಕಾಮನ್ ಆಗ್ಬಿಟ್ಟಿದೆ. ದೀರ್ಘಕಾಲದ ಸುಖಮಯ ದಾಂಪತ್ಯ ನಿಮ್ಮದಾಗಬೇಕು ಅಂತಿದ್ರೆ ನಾವ್ ಕೊಡೋ ಸಲಹೆಗಳನ್ನು ತಪ್ಪದೇ ಪಾಲಿಸಿ.

ನಿಮ್ಮ ಅತ್ತೆ, ಮಾವನ ಜೊತೆ ಪ್ರೀತಿ ವಿಶ್ವಾಸದಿಂದಿರಿ. ನಿಮ್ಮ ಸಂಗಾತಿಗೆ ಉಸಿರುಗಟ್ಟಿಸುವಂತಹ ವಾತಾವರಣ ನಿರ್ಮಾಣ ಮಾಡಬೇಡಿ, ಕೊಂಚವಾದ್ರೂ ಸ್ವಾತಂತ್ರ್ಯ ಕೊಡಿ. ನಿಮ್ಮ ದಾಂಪತ್ಯದಲ್ಲಿ ಸದಾ ಕಾಲ ಹೊಸತನವಿರಲಿ.

ಘನತೆ ಮತ್ತು ಗೌರವ ಎರಡೂ ಇರಲೇಬೇಕು. ನಿಮ್ಮ ಸಂಗಾತಿಯನ್ನು ಪ್ರೀತಿಸಿ, ಗೌರವಿಸಿ. ಘನತೆ ನಿಮ್ಮ ಬಂಧನವನ್ನು ಬಲಪಡಿಸುತ್ತೆ, ದೀರ್ಘಕಾಲದ ಅನುಬಂಧ ನಿಮ್ಮದಾಗುತ್ತದೆ. ನೀವು ಅವನ/ಆಕೆಯನ್ನು ಮದುವೆಯಾಗಿದ್ದೀರಾ ಎಂದ್ರೆ ನೀವು ಅವರ ಬಾಳಿನ ಅವಿಭಾಜ್ಯ ಅಂಗ ಎಂದರ್ಥ. ಅದರರ್ಥ ನೀವು ಅವರನ್ನು ಆಳಬೇಕು ಎಂದಲ್ಲ. ಕುಟುಂಬದವರು, ಸ್ನೇಹಿತರ ಎದುರು ಅಥವಾ ಏಕಾಂಗಿಯಾಗಿರುವಾಗ ಪರಸ್ಪರರ ಮೇಲೆ ಪ್ರಾಬಲ್ಯ ಸಾಧಿಸಬಾರದು. ನಿಮಗೆ ಒಪ್ಪಿಗೆಯಿಲ್ಲದಿದ್ದರೂ ಪರಸ್ಪರರ ಭಾವನೆ ಮತ್ತು ನಿರ್ಧಾರಗಳನ್ನು ಗೌರವಿಸಿ.

ಪರಸ್ಪರ ರಾಜಿಯಾಗಿ. ಕಾಂಪ್ರಮೈಸ್ ನಿಮ್ಮ ದೌರ್ಬಲ್ಯದ ಲಕ್ಷಣ ಎಂದುಕೊಳ್ಳಬೇಡಿ. ಬದುಕಿನುದ್ದಕ್ಕೂ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಹಲವು ಸಂದರ್ಭಗಳು ಎದುರಾಗುತ್ತವೆ. ಅದರರ್ಥ ನಿಮ್ಮ ನಂಬಿಕೆ ಮತ್ತು ವಿಚಾರಗಳನ್ನು ಬಿಟ್ಟುಕೊಡಬೇಕೆಂದಲ್ಲ. ಒಮ್ಮತ ಅಥವಾ ಪರಿಹಾರದಿಂದ ಸಂತೋಷ ಸಿಗುವಂತಿದ್ದರೆ ಅದನ್ನೇ ಮಾಡಿ.

ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆಯಿರಲಿ. ಆರ್ಥಿಕ ಸ್ಥಿರತೆ ಹೊಂದುವ ಅರ್ಹತೆ ಪ್ರತಿಯೊಬ್ಬರಿಗೂ ಇದೆ. ಪ್ರತ್ಯೇಕ ಬ್ಯಾಂಕ್ ಖಾತೆಯಿದ್ದು, ಅದರಲ್ಲಿ ನೀವು ಹಣ ಕೂಡಿಟ್ಟರೆ ತಪ್ಪೇನೂ ಇಲ್ಲ. ಆದ್ರೆ ನಿಮ್ಮ ಸಂಗಾತಿಗೂ ಅದರ ಬಗ್ಗೆ ತಿಳಿದಿರಲಿ. ಯಾವುದಾದ್ರೂ ಪಾಲಿಸಿಯಲ್ಲಿ ಹೂಡಿಕೆ ಮಾಡಿದ್ರೆ, ಸಾಲ ಪಡೆದ್ರೆ ಅದನ್ನು ಮುಚ್ಚಿಡಬೇಡಿ. ನಿಮ್ಮ ಮೇಲೆ ನಂಬಿಕೆ ಕಳೆದುಕೊಳ್ಳುವಂತಹ, ಸಂಬಂಧದಲ್ಲಿ ಬಿರುಕು ಮೂಡುವಂತಹ ಸಂದರ್ಭ ಸೃಷ್ಟಿಸಿಕೊಳ್ಳಬೇಡಿ.

ಅತ್ತೆ‌ – ಮಾವನ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳಿ. ಅವರ ಜೊತೆ ಹೊಂದಿಕೊಂಡು, ಉತ್ತಮವಾಗಿ ಸಂಭಾಷಿಸಿ. ಪ್ರತಿಬಾರಿ ಭೇಟಿಯಾದಾಗ್ಲೂ ಔತಣಕೂಟದಂತಹ ವಿಶೇಷ ಕ್ಷಣಗಳನ್ನು ಆಯೋಜಿಸಿ. ಇದು ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ.

ಪ್ರಣಯ ಸದಾ ಹಸಿರಾಗಿರಲಿ. ಮದುವೆಯಾಗಿ ಎಷ್ಟೇ ವರ್ಷಗಳಾಗಿದ್ದರೂ ದಾಂಪತ್ಯ ಹಳತಾಗಬಾರದು. ಹೊಗಳಿಕೆ, ಮೆಚ್ಚುಗೆ ಎಲ್ಲವೂ ಇರಲಿ. ಸಂಗಾತಿಗಾಗಿ ಸಮಯ ಮೀಸಲಿಡಿ. ಮಕ್ಕಳನ್ನು ಹೊಂದಿದ್ದರೆ ಅವರನ್ನು ಅಜ್ಜಿ, ತಾತನ ಬಳಿ ಬಿಟ್ಟು ಒಂದಷ್ಟು ಸಮಯ ಜೊತೆಯಾಗಿ ಕಳೆಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...