alex Certify ದೀರ್ಘಕಾಲದ ಆರೋಗ್ಯಕ್ಕೆ ಅತ್ಯಗತ್ಯ ಕ್ಲೆನ್ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀರ್ಘಕಾಲದ ಆರೋಗ್ಯಕ್ಕೆ ಅತ್ಯಗತ್ಯ ಕ್ಲೆನ್ಸಿಂಗ್

 

ಒತ್ತಡ, ಸರಿಯಾದ ಆಹಾರ ಕ್ರಮದ ಕೊರತೆಯಿಂದಾಗಿ ದೇಹದೊಳಗೆ ಟಾಕ್ಸಿನ್ ಮನೆ ಮಾಡಿರುತ್ತವೆ. ಇವುಗಳು ಕ್ರಮೇಣ ಟಿಶ್ಯೂವಿನೊಟ್ಟಿಗೆ ಬೆರೆತು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ. ಅಲ್ಲದೇ ಸರಾಗ ಜೀರ್ಣಕ್ರಿಯೆಗೂ ಕೊರತೆಯುಂಟಾಗುತ್ತದೆ. ಆದ್ದರಿಂದ ತಿಂಗಳಿಗೆ ಒಂದು ದಿನ ದೇಹವನ್ನು ಕ್ಲೆನ್ಸ್ ಮಾಡುವುದು ಉತ್ತಮ.

ಕ್ಲೆನ್ಸಿಂಗ್​ನ ಪ್ರಯೋಜನಗಳು

ಕ್ಲೆನ್ಸಿಂಗ್​ನಿಂದ ನಿಮ್ಮ ಜೀರ್ಣಕ್ರಿಯೆಗೆ ವಿರಾಮ ಸಿಗುವುದಲ್ಲದೇ ರಿಪೇರ್ ಆಗಲು ಅವಕಾಶ ಸಿಗುತ್ತದೆ. ನರವ್ಯೂಹ ಮತ್ತು ಮಿದುಳಿಗೆ ಶಾಂತತೆ ಒದಗಿಸುತ್ತದೆ.

ಮಾನಸಿಕ, ದೈಹಿಕ, ಅಧ್ಯಾತ್ಮಿಕ, ಭಾವನಾತ್ಮಕ ವಿಷಯದಲ್ಲಿ ಸ್ಥಿರತೆ ಸಿಗುತ್ತದೆ.

ಜೀವನಕ್ಕೆ ಅಗತ್ಯವಾದ ಉತ್ಸಾಹವನ್ನು ನೀಡುತ್ತದೆ.

ದೇಹದ ತೂಕವನ್ನು ಸಮತೋಲನದಲ್ಲಿಡುತ್ತದೆ.

ನಿದ್ರಾಹೀನತೆ ಕೊರತೆ ನೀಗಿಸಿ, ಸುಖ ನಿದ್ರೆಗೆ ಕಾರಣವಾಗುತ್ತದೆ.

ದೇಹಕ್ಕೆ ಪೋಷಕಾಂಶವನ್ನು ಹೀರಿಕೊಳ್ಳುವ ಶಕ್ತಿ ನೀಡುತ್ತದೆ.

ಕ್ಲೆನ್ಸ್ ಮಾಡೋದು ಹೇಗೆ?

ಇಷ್ಟೆಲ್ಲಾ ಪ್ರಯೋಜನಗಳಿರುವ ಕ್ಲೆನ್ಸಿಂಗ್​ ಅನ್ನು ಮಾಡೋದು ಬಹಳ ಸುಲಭ. ಮೊದಲಿಗೆ ನಿಮ್ಮ ಡೆಯಟ್ ಮತ್ತು ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ತನ್ನಿ.

ಮೊನೊ ಡಯೆಟ್ ಅಳವಡಿಸಿಕೊಳ್ಳಿ. ಸರಾಗವಾಗಿ ಜೀರ್ಣವಾಗುವ ಕಿಚಡಿ, ಡಿ ಟಾಕ್ಸ್ ಜ್ಯೂಸ್ ಸೇವನೆ. ಇತಿ ಮಿತಿಯಲ್ಲಿರಿ.

ಮೊದಲ ಬಾರಿ ಡೇಟಿಂಗ್‌ ಹೋಗ್ತಿದ್ದೀರಾ….? ಈ ತಪ್ಪುಗಳನ್ನು ಮಾಡಬೇಡಿ

ಗೋಧಿ ಹಿಟ್ಟು, ಡೈರೀ ಉತ್ಪ್ನ, ಸೋಯಾ ಸೇವನೆ ಬೇಡ.

ಯಥೇಚ್ಚವಾಗಿ ನೀರು ಕುಡಿಯುವುದು, ಗಟ್ಟಿ ಪದಾರ್ಥಗಳನ್ನು ಸೇವಿಸದೇ ಇರುವುದು ಇದೆಲ್ಲವೂ ಕೋಶಗಳನ್ನು ರಿಜೆನ್ಯೂಯೇಟ್ ಮಾಡುತ್ತವೆ.
ವಯಸ್ಸು 30 ದಾಟಿದ ಮೇಲೆ ಈ ರೀತಿ ಕ್ರಮಗಳನ್ನು ಅನುಸರಿಸುವುದು ಹೆಚ್ಚು ಪ್ರಯೋಜನಕಾರಿ. ಅಲ್ಲದೇ ನಿಮಗೆ ಮುಟ್ಟಿನ ಸಮಸ್ಯೆ, ಸಂತಾನಕ್ಕೆ ಪ್ರಯತ್ನಪಡುತ್ತಿದ್ದರೆ, ಮಾನಸಿಕ ಅಸಮತೋಲನ, ಥೈರಾಯ್ಡ್, ಹಾರ್ಮೋನಲ್ ಸಮಸ್ಯೆ ಇದ್ದರೆ ಈ ಕ್ಲೆನ್ಸಿಂಗ್ ಅಳವಡಿಸಿಕೊಳ್ಳಿ. ದೇಹದ ಒಳಗೆ ಶುದ್ಧಿಯಾದಷ್ಟು ದೇಹ ಹೆಚ್ಚು ಬಲಗೊಳ್ಳುತ್ತದೆ. ದೈಹಿಕ ಸಾಮರ್ಥ್ಯ ಹೆಚ್ಚಿದ್ದಷ್ಟು ದೇಹ ಆರೋಗ್ಯದಿಂದ ನಳನಳಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...