ದೀಪಗಳ ಹಬ್ಬ ದೀಪಾವಳಿ ಹತ್ತಿರ ಬರ್ತಿದೆ. ಹಬ್ಬವನ್ನು ಆಚರಿಸಲು ತಯಾರಿ ಜೋರಾಗಿ ನಡೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯವೂ ನಡೆಯುತ್ತಿದೆ. ಮನೆಯ ಕೆಲವೊಂದು ಜಾಗವನ್ನು ದೀಪಾವಳಿಗೂ ಮುನ್ನ ಅವಶ್ಯವಾಗಿ ಸ್ವಚ್ಛಗೊಳಿಸಬೇಕು. ಮನೆಯ ಆ ಜಾಗಗಳು ಸ್ವಚ್ಛ, ಸುಂದರವಾಗಿದ್ದರೆ ಅದೃಷ್ಟ ಒಲಿದು ಬರುತ್ತದೆ.
ಟಿ-20 ವಿಶ್ವಕಪ್ : ಪಂದ್ಯಕ್ಕೂ ಮುನ್ನ ಚರ್ಚೆಗೆ ಕಾರಣವಾಗಿದೆ ಕೊಹ್ಲಿ ಟ್ವೀಟ್
ದೀಪಾವಳಿಯಲ್ಲಿ ಲಕ್ಷ್ಮಿಯ ಪೂಜೆ ಅದ್ಧೂರಿಯಾಗಿ ನಡೆಯುತ್ತದೆ. ಲಕ್ಷ್ಮಿ ಕೃಪೆಗೆ ಪ್ರತಿಯೊಬ್ಬರೂ ಪಾತ್ರರಾಗಬೇಕೆಂದ್ರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ವಾಸ್ತು ಪ್ರಕಾರ ಮನೆಯ ಈಶಾನ್ಯ ಭಾಗ ಬಹಳ ಮಹತ್ವದ್ದು. ಅಲ್ಲಿ ದೇವತೆಗಳು ನೆಲೆಸುತ್ತವೆ. ಹಾಗಾಗಿ ಮನೆಯ ದೇವರ ಕೋಣೆ ಈಶಾನ್ಯ ಭಾಗದಲ್ಲಿದ್ದರೆ ಒಳ್ಳೆಯದು. ದೀಪಾವಳಿಗೂ ಮುನ್ನ ಈಶಾನ್ಯ ಭಾಗವನ್ನು ಅಗತ್ಯವಾಗಿ ಸ್ವಚ್ಛಗೊಳಿಸಿ.
ಈಶಾನ್ಯ ಭಾಗದಲ್ಲಿ ಕೊಳಕಿದ್ದರೆ, ಬಳಸದ ವಸ್ತುವಿದ್ದರೆ ಆ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುವುದಿಲ್ಲ. ಹಾಗಾಗಿ ಈಶಾನ್ಯ ಭಾಗ ಸ್ವಚ್ಛವಾಗಿರಲಿ.
ಮಾರಾಟಕ್ಕಿಟ್ಟ ಫ್ಲಾಟ್ ನಲ್ಲಿ ಎಲ್ಲಿದೆ ಅಡುಗೆ ಮನೆ ಎಂದು ಜನ ಕನ್ಫ್ಯೂಸ್…!
ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಮಾಡುವ ದಿನ ಬೆಳಿಗ್ಗೆ ಬೇಗ ಎದ್ದು, ಮನೆಯ ಪೂರ್ವ ಭಾಗವನ್ನು ಸ್ವಚ್ಛಗೊಳಿಸಿ. ಮನೆಯನ್ನು ಸಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ಹಾಗೆ ಮನೆಯಲ್ಲಿ ಲಕ್ಷ್ಮಿ ನೆಲೆಯೂರುತ್ತಾಳೆ.
ಮನೆಯ ಉತ್ತರ ದಿಕ್ಕು ಕೂಡ ಸ್ವಚ್ಛವಾಗಿರಬೇಕು. ಅಲ್ಲಿ ತಾಯಿ ನೆಲೆಸುತ್ತಾಳೆಂಬ ನಂಬಿಕೆಯಿದೆ.