alex Certify ದಿನವಿಡೀ ಆಯಾಸದ ಅನುಭವವಾಗ್ತಿದೆಯಾ….? ಇಲ್ಲಿದೆ ಕಾರಣ ಮತ್ತು ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನವಿಡೀ ಆಯಾಸದ ಅನುಭವವಾಗ್ತಿದೆಯಾ….? ಇಲ್ಲಿದೆ ಕಾರಣ ಮತ್ತು ಪರಿಹಾರ

ಕೆಲವರಿಗೆ ದಿನವಿಡೀ ಆಯಾಸವಾಗುತ್ತದೆ. ದೇಹದಲ್ಲಿ ಎನರ್ಜಿಯೇ ಇಲ್ಲದಂತೆ ಭಾಸವಾಗುತ್ತದೆ. ಯಾಕ್ಹೀಗೆ ಅನ್ನೋ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ದೇಹದಲ್ಲಿನ ದೌರ್ಬಲ್ಯ ಅಥವಾ ನಿದ್ರೆಯ ಕೊರತೆಯಿಂದಾಗಿ ಯಾವಾಗಲೂ ದಣಿವಾಗುತ್ತದೆ. ಈ ರೀತಿ ಆಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಸಮಸ್ಯೆಯಿಂದ ಪಾರಾಗುವುದು ಹೇಗೆ ನೋಡೋಣ.

ದೇಹದಲ್ಲಿ ನೀರಿನಂಶ ಕಡಿಮೆಯಾಗಿದ್ದರೆ ಯಾವಾಗಲೂ ದಣಿದ ಅನುಭವವಾಗುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಹೆಚ್ಚು. ಹಾಗಾಗಿ ಬೇಸಿಗೆಯಲ್ಲಿ ದಿನವಿಡೀ ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದು ನಿಮ್ಮ ಆಯಾಸವನ್ನು ಹೋಗಲಾಡಿಸುತ್ತದೆ ಮತ್ತು ಉತ್ಸಾಹದಿಂದಿರುತ್ತೀರಿ.

ಆರೋಗ್ಯಕರ ಆಹಾರವನ್ನು ಸೇವಿಸದೇ ಇದ್ದರೆ ಆಯಾಸದ ಅನುಭವ ಹೆಚ್ಚಾಗಿರುತ್ತದೆ. ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸಬೇಡಿ.

ನಿದ್ದೆ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಸಾಕಷ್ಟು ನಿದ್ದೆ ಮಾಡದಿದ್ದರೆ ದಿನವಿಡೀ ಸುಸ್ತಾಗಿರುತ್ತೀರಿ. ನಿದ್ರೆಯ ಸಮಯದಲ್ಲಿ ನಿಮ್ಮ ದೇಹವು ಅಗತ್ಯವಾದ ಬೆಳವಣಿಗೆಯ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದರಿಂದಾಗಿ ನೀವು ಮರುದಿನ ಶಕ್ತಿಯುತವಾಗಿರುತ್ತೀರಿ.

ದೇಹದಲ್ಲಿ ಶಕ್ತಿಯೇ ಇಲ್ಲ ಎನಿಸಿದಾಗ ಕೆಫೀನ್‌ಯುಕ್ತ ಪಾನೀಯಗಳನ್ನು ಸೇವಿಸಬೇಕು. ಕಾರ್ಬೋಹೈಡ್ರೇಟ್‌ಯುಕ್ತ ಆಹಾರಗಳನ್ನು ಹೆಚ್ಚು ತಿನ್ನಬೇಡಿ. ಬದಲಾಗಿ ಕೆಲವು ಆರೋಗ್ಯಕರ ಆಹಾರ ಸಂಯೋಜನೆಗಳನ್ನು ಆಯ್ಕೆ ಮಾಡಬಹುದು.

ಪೋಷಕಾಂಶ ಸಮೃದ್ಧವಾಗಿರುವ ಆಹಾರಗಳನ್ನೇ ಸೇವಿಸಿ. ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದು ನಿಮ್ಮ ದೇಹದ ಶಕ್ತಿಯನ್ನು ಕಾಪಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...