ಬೇಕಾಗುವ ಸಾಮಾಗ್ರಿಗಳು:
ಅಕ್ಕಿ ಹಿಟ್ಟು- 2 ಕಪ್, ಹುರಿಗಡಲೆ- ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಬಿಳಿ ಎಳ್ಳು- 2 ಟೀ ಚಮಚ, ಜೀರಿಗೆ- 2 ಟೀ ಚಮಚ, ಕರಿಯಲು ಎಣ್ಣೆ
ಹಬ್ಬಕ್ಕೆ ಊರಿಗೆ ಹೋಗುವ ಮೊದಲು ತಿಳಿದಿರಲಿ ಈ ನಿಯಮ
ಮಾಡುವ ವಿಧಾನ:
ಅಕ್ಕಿ ಹಿಟ್ಟನ್ನು 2 ರಿಂದ 3 ನಿಮಿಷ ಕಾಲ ಸಣ್ಣ ಉರಿಯಲ್ಲಿ ಸ್ವಲ್ಪ ಹುರಿಯಿರಿ. ಬಳಿಕ ಪಾತ್ರೆಗೆ ಅಕ್ಕಿ ಹಿಟ್ಟನ್ನು ಎತ್ತಿಟ್ಟು ಇದಕ್ಕೆ ಒಂದು ಕಪ್ ನಷ್ಟು ಹುರಿಗಡಲೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಸೇರಿಸಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಬಳಿಕ 2 ಟೀ ಚಮಚ ಬಿಳಿ ಎಳ್ಳು, 2 ಟೀ ಚಮಚ ಜೀರಿಗೆ ಹಾಕಿ ಮಿಕ್ ಮಾಡಿ.
ನಂತರ 2 ಟೀ ಚಮಚದಷ್ಟು ಕಾಯಿಸಿರುವ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪನೇ ಉಗುರು ಬೆಚ್ಚವಿರುವ ನೀರು ಹಾಕಿ ನಾದಿಕೊಳ್ಳಿ. ತುಂಬಾ ನೀರು ಸೇರಿಸಬೇಡಿ. 5 ನಿಮಿಷದಷ್ಟು ಚೆನ್ನಾಗಿ ನಾದಿಕೊಳ್ಳಿ. ನಂತರ ಚಕ್ಕುಲಿ ಒರಳಿಗೆ ಈ ಹಿಟ್ಟು ಹಾಕಿಕೊಂಡು, ಒಂದು ಎಲೆ ಅಥವಾ ಪ್ಲಾಸ್ಟಿಕ್ ಮೇಲೆ ಚಕ್ಕುಲಿಯನ್ನು ರೌಂಡ್ ಆಗಿ ಮಾಡಿಕೊಳ್ಳಿ. ನಂತರ ಕಾದ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕರಿದರೆ ಸವಿಯಲು ಚಕ್ಕುಲಿ ರೆಡಿ.