alex Certify ದಾಲ್-ರೊಟ್ಟಿ ಸೇವಿಸುತ್ತಿರುವ ಫೋಟೋ ಹಂಚಿಕೊಂಡ ಆಸೀಸ್ ಕ್ರಿಕೆಟಿಗ: ಪಿಸಿಬಿಯನ್ನು ಟ್ರೋಲ್ ಮಾಡಿದ್ರು ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಲ್-ರೊಟ್ಟಿ ಸೇವಿಸುತ್ತಿರುವ ಫೋಟೋ ಹಂಚಿಕೊಂಡ ಆಸೀಸ್ ಕ್ರಿಕೆಟಿಗ: ಪಿಸಿಬಿಯನ್ನು ಟ್ರೋಲ್ ಮಾಡಿದ್ರು ಅಭಿಮಾನಿಗಳು

ಹಲವಾರು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರವಾಸ ತೆರಳಿದೆ. ರಾವಲ್ಪಿಂಡಿಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಡ್ರಾ ಮಾಡಿಕೊಂಡಿವೆ. ಇದೀಗ ಕರಾಟಿಯಲ್ಲಿ 2ನೇ ಟೆಸ್ಟ್ ನಲ್ಲಿ ಪೈಪೋಟಿಯನ್ನು ಪುನರಾರಂಭಿಸಿವೆ. ಆದರೆ, ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಟ್ರೋಲ್ ಗೆ ಒಳಗಾಗಿದೆ.

ಕರಾಚಿ ಟೆಸ್ಟ್ ಗೂ ಮುನ್ನ ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರು ದಾಲ್ ಮತ್ತು ರೊಟ್ಟಿಯನ್ನು ಆನಂದಿಸುತ್ತಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯನ್ ಕ್ರಿಕೆಟಿಗ ಊಟವನ್ನು ಬಹಳ ರುಚಿಕರವಾಗಿದೆ ಎಂದು ಬರೆದಿದ್ದಾರೆ. ಆದರೂ  ಟ್ವಿಟರ್ ಬಳಕೆದಾರರು ಇದರಿಂದ ಪ್ರಭಾವಿತರಾಂದತೆ ಕಂಡಿಲ್ಲ. ಅನೇಕ ಅಭಿಮಾನಿಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ಟ್ರೋಲ್ ಮಾಡಿದ್ದಾರೆ.

ಒಬ್ಬ ಖೈದಿ ಕೂಡ ಭಾರತದಲ್ಲಿ ಇದಕ್ಕಿಂತ ಉತ್ತಮ ಗುಣಮಟ್ಟದ ಊಟವನ್ನು ಪಡೆಯುತ್ತಾನೆ. ಆದರೆ, ನೀವು ಪಾಕಿಸ್ತಾನದಲ್ಲಿ ಅತಿಥಿಯಾಗಿದ್ದೀರಿ ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. ಅಯ್ಯೋ ಮನೆ ನೆನಪಾಗ್ತಿದೆ ಎಂಬಂತಹ ಟ್ರೋಲ್ ಗಳನ್ನು ಕೂಡ ಮಾಡಲಾಗಿದೆ. ಕ್ರಿಕೆಟ್ ಪ್ರೇಮಿಗಳು ಪಿಸಿಬಿಯನ್ನು ಗೋಳು ಹೊಯ್ದದ್ದಂತೂ ಸುಳ್ಳಲ್ಲ.

1998ರ ನಂತರ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸದಲ್ಲಿದ್ದು, ಭದ್ರತಾ ಭಯದ ಹಿನ್ನೆಲೆಯಲ್ಲಿ ಭೇಟಿ ನೀಡಲು ನಿರಾಕರಿಸಿತ್ತು.

— Marnus Labuschagne (@marnus3cricket) March 11, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...