alex Certify ದಸರಾ ಸಂಭ್ರಮಾಚರಣೆಯಲ್ಲಿ ಜನಸಮೂಹದ ಮೇಲೆ ಬಿದ್ದ ರಾವಣನ ಪ್ರತಿಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಸರಾ ಸಂಭ್ರಮಾಚರಣೆಯಲ್ಲಿ ಜನಸಮೂಹದ ಮೇಲೆ ಬಿದ್ದ ರಾವಣನ ಪ್ರತಿಕೃತಿ

ನವರಾತ್ರಿಯ ಕೊನೆಯ ದೊಡ್ಡ ಆಚರಣೆಯಾದ ದಸರಾ, ಭಗವಾನ್​ ಶ್ರೀ ರಾಮನು ಲಂಕಾದ ರಾಕ್ಷಸ ರಾಜನಾದ ತನ್ನ ಶತ್ರು ರಾವಣನನ್ನು ಸೋಲಿಸಿದ ದಿನವನ್ನು ಸೂಚಿಸುತ್ತದೆ. ಕೆಡುಕಿನ ದಿನಗಳ ಬಳಿಕ ವಿಜಯವನ್ನು ಸೂಚಿಸಲು ರಾವಣ, ಅವನ ಕಿರಿಯ ಸಹೋದರ ಕುಂಭಕರ್ಣ, ಮೇಘನಾದನ ಪ್ರತಿಕೃತಿಗೆ ಭಾರತದ ಹಲವಾರು ರಾಜ್ಯಗಳಲ್ಲಿ ಬೆಂಕಿ ಹಚ್ಚಲಾಗುತ್ತದೆ. ರಾಕ್ಷಸ ವ್ಯಕ್ತಿಗಳ ಹೃದಯದ ಕಡೆಗೆ ಉರಿಯುತ್ತಿರುವ ಬಾಣವನ್ನು ಹೊಡೆಯುವ ಮೂಲಕ ಪ್ರತಿಕೃತಿಗಳನ್ನು ಸುಡಲಾಗುತ್ತದೆ.

ಆದರೆ, ಈ ಬಾರಿ 10 ತಲೆಯ ರಾವಣ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ಮತ್ತೆ ಹೋರಾಡಿದಂತಿದೆ. ಇದೀಗ ವೈರಲ್​ ಆಗಿರುವ ವೀಡಿಯೊದಲ್ಲಿ ರಾವಣನ ದಹನದ ಪ್ರತಿಕೃತಿಯು ಸಾಕಷ್ಟು ದೂರದಲ್ಲಿ ನಿಂತಿರುವ ಜನಸಮೂಹದ ಮೇಲೆ ಉರುಳಿಬಿದ್ದಿದೆ.

ಎನರು ಸಂಭ್ರದಲ್ಲಿದ್ದಾಗ ಪ್ರತಿಕೃತಿಯಲ್ಲಿದ್ದ ಪಟಾಕಿ ಸ್ಪೋಟಗೊಳ್ಳುತ್ತಾ, ಪ್ರತಿಕೃತಿ ಜನರ ಮೇಲೆ ಉರುಳಿಬಿತ್ತು. ಅದೃಷ್ಟವಶಾತ್​ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ.

ಟ್ವಿಟ್ಟರ್​ ಬಳಕೆದಾರರು ಈ ವಿಡಿಯೋ ಮುಂದಿಟ್ಟುಕೊಂಡು ಹಾಸ್ಯ ಮಯ ಟೀಕೆಗಳನ್ನು ಮಾಡಿದ್ದಾರೆ. ಹಲವಾರು ವರ್ಷಗಳಿಂದ ತನ್ನ ಪ್ರತಿಕೃತಿಯನ್ನು ಸುಡುವ ಜನರಿಂದ ಬೇಸತ್ತ ನಂತರ ರಾವಣ ಗುಂಡು ಹಾರಿಸಿದ್ದಾನೆ ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ.
ಇನ್ನು ಕೆಲವರು ವಿವಿಧ ಕಡೆ ಇಂತಹ ಘಟನೆಗಳು ನಡೆದ ವಿಡಿಯೋವನ್ನುಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...