alex Certify ದಂಗಾಗಿಸುವಂತಿದೆ ಈ ಬಾರಿಯ ‘ವಿಂಬಲ್ಡನ್’ ವಿಜೇತರಿಗೆ ಸಿಗಲಿರುವ ಬಹುಮಾನದ ಮೊತ್ತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಈ ಬಾರಿಯ ‘ವಿಂಬಲ್ಡನ್’ ವಿಜೇತರಿಗೆ ಸಿಗಲಿರುವ ಬಹುಮಾನದ ಮೊತ್ತ…!

ವಿಂಬಲ್ಡನ್ ಟೆನಿಸ್ ಅತ್ಯಂತ ಪ್ರತಿಷ್ಠಿತ ಟೂರ್ನಿ. ಇದನ್ನು ವೀಕ್ಷಿಸಲು ವಿಶ್ವದಾದ್ಯಂತ ಕ್ರೀಡಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದು, ಈ ಬಾರಿಯ ವಿಂಬಲ್ಡನ್ ಟೂರ್ನಿ ಜೂನ್ 27ರಂದು ಆರಂಭವಾಗಲಿದೆ.

ಈ ಬಾರಿಯ ವಿಂಬಲ್ಡನ್ ವಿಜೇತರಿಗೆ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಬರೋಬ್ಬರಿ 19.44 ಕೋಟಿ ರೂಪಾಯಿಗಳನ್ನು ತಮ್ಮ ಜೇಬಿಗಿಳಿಸಲಿದ್ದಾರೆ. ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗುವವರಿಗೆ ತಲಾ 19.44 ಕೋಟಿ ರೂಪಾಯಿಗಳು ಸಿಗಲಿದೆ.

ಟೂರ್ನಿಯ ಒಟ್ಟು ಬಹುಮಾನದ ಮೊತ್ತ 400 ಕೋಟಿ ರೂಪಾಯಿಗಳಾಗಿದ್ದು, ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ನಲ್ಲಿ ರನ್ನರ್-ಅಪ್ ಆಗುವವರು ತಲಾ 9.74 ಕೋಟಿ ರೂಪಾಯಿ ಪಡೆಯಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಬಹುಮಾನದ ಮೊತ್ತದಲ್ಲಿ ಶೇಕಡಾ 11.1 ರಷ್ಟು ಏರಿಕೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...