alex Certify ಥೈರಾಯ್ಡ್ ರೋಗಿಗಳು ತಿನ್ನುವಂತಿಲ್ಲ ಈ ಆಹಾರ..…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್ ರೋಗಿಗಳು ತಿನ್ನುವಂತಿಲ್ಲ ಈ ಆಹಾರ..…!

ಥೈರಾಯ್ಡ್ ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಗ್ರಂಥಿ. ಇದರಿಂದ ಥೈರಾಕ್ಸಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಎಷ್ಟು ಮುಖ್ಯ ಎಂದರೆ ಅದರ ಇಳಿಕೆ ಅಥವಾ ಹೆಚ್ಚಳ ಎರಡೂ ಸಮಸ್ಯೆಯನ್ನು ಉಂಟುಮಾಡುತ್ತದೆ. ಎರಡೂ ಸಂದರ್ಭಗಳಲ್ಲಿ ರೋಗಿಯು ತೊಂದರೆಯನ್ನು ಎದುರಿಸಬೇಕಾಗುತ್ತದೆ. ಥೈರಾಯ್ಡ್ ಸಮಸ್ಯೆಗಳಿಂದಾಗಿ ಸ್ನಾಯುಗಳಲ್ಲಿ ನೋವು ಬರಬಹುದು. ಕೀಲು ನೋವು, ಒಣ ತ್ವಚೆ, ಬೊಜ್ಜು ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಥೈರಾಯ್ಡ್‌ ಸಮಸ್ಯೆ ಇರುವವರು ಆಹಾರ ಮತ್ತು ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಕೆಲವು ಆಹಾರಗಳನ್ನು ಸೇವಿಸುವುದರಿಂದ ಈ ಸಮಸ್ಯೆ ಹೆಚ್ಚಾಗಬಹುದು.

ಫೈಬರ್ ಭರಿತ ತರಕಾರಿ

ಹೆಚ್ಚು ಫೈಬರ್ ಹೊಂದಿರುವ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ಥೈರಾಯ್ಡ್ ರೋಗಿಗಳು ಫೈಬರ್ ಭರಿತ ತರಕಾರಿಗಳನ್ನು ಸೇವಿಸಬಾರದು. ಅವುಗಳನ್ನು ಸೇವಿಸುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಉದರ ಬಾಧೆ ಕೂಡ ಉಂಟಾಗಬಹುದು. ಹಾಗಾಗಿ ಬೀನ್ಸ್ ಸೇರಿದಂತೆ ನಾರಿನ ತರಕಾರಿಗಳನ್ನು ಸೇವಿಸುವುದನ್ನು ತಪ್ಪಿಸಬೇಕು.

ಸೋಯಾ

ಥೈರಾಯ್ಡ್ ಸಮಸ್ಯೆಗಳಿದ್ದರೆ ಸೋಯಾ ಉತ್ಪನ್ನಗಳನ್ನು  ಸೇವಿಸುವಂತಿಲ್ಲ. ಇದನ್ನು ಸೇವಿಸುವುದರಿಂದ ಥೈರಾಯ್ಡ್ ಸಮಸ್ಯೆಗಳು ಹೆಚ್ಚಾಗುತ್ತವೆ. ಆರೋಗ್ಯವಾಗಿರಲು ಬಯಸಿದರೆ  ಸೋಯಾದಿಂದ ದೂರವಿರಿ.

ಗ್ಲುಟನ್ ಪ್ರೋಟೀನ್

ಥೈರಾಯ್ಡ್ ರೋಗಿಗಳು ಗ್ಲುಟನ್ ಪ್ರೋಟೀನ್ ಹೊಂದಿರುವ ವಸ್ತುಗಳನ್ನು ಸೇವಿಸಬಾರದು. ಗ್ಲುಟನ್ ಥೈರಾಯ್ಡ್ ಔಷಧವನ್ನು ತಟಸ್ಥಗೊಳಿಸುತ್ತದೆ. ಇದರಿಂದಾಗಿ ಸಮಸ್ಯೆ ಹೆಚ್ಚಾಗಬಹುದು. ಅದಕ್ಕಾಗಿಯೇ ಬ್ರೆಡ್, ಬರ್ಗರ್, ಕೇಕ್, ಕ್ಯಾಂಡಿಯಂತಹ ಗ್ಲುಟನ್ ಆಹಾರಗಳನ್ನು ತಿನ್ನಬೇಡಿ.

ಸಂಸ್ಕರಿಸಿದ ಆಹಾರ

ಥೈರಾಯ್ಡ್ ತೊಂದರೆ ಇದ್ದಾಗ ಸಂಸ್ಕರಿಸಿದ ಆಹಾರವನ್ನು ತಿನ್ನುವಂತಿಲ್ಲ. ಸಂಸ್ಕರಿಸಿದ ಆಹಾರಗಳು ಕೂಡ ಥೈರಾಯ್ಡ್‌ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...