alex Certify ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡಲು ಸಹಾಯಕ ನುಗ್ಗೆಸೊಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡಲು ಸಹಾಯಕ ನುಗ್ಗೆಸೊಪ್ಪು

ನುಗ್ಗೆಸೊಪ್ಪು ಸೇವಿಸುವುದರಿಂದ ಸಾಕಷ್ಟು ರೋಗಗಳನ್ನು ಗುಣಪಡಿಸಬಹುದು ಎಂದು ಹೇಳಲಾಗುತ್ತದೆ. ಇದು ತಿನ್ನುವುದಕ್ಕೆ ರುಚಿಕರವಲ್ಲವೆಂದು ಕೆಲವರು ನುಗ್ಗೆಸೊಪ್ಪು ಎಂದರೆ ಮೂಗು ಮುರಿಯುತ್ತಾರೆ. ಇದರ ಪ್ರಯೋಜನದ ಬಗ್ಗೆ ತಿಳಿದುಕೊಂಡರೆ ಇನ್ನೆಂದೂ ನೀವು ನುಗ್ಗೆಸೊಪ್ಪನ್ನು ತೆಗಳುವುದಿಲ್ಲ…!

ಒಂದು ಬಟ್ಟಲು ನುಗ್ಗೆ ಸೊಪ್ಪಿಗೆ ಒಂದೂವರೆ ಬಟ್ಟಲು ನೀರು ಹಾಕಿ ಚೆನ್ನಾಗಿ ಕುದಿಸಿ ಬಣ್ಣ ಬದಲಾದಾಗ ಸೋಸಿಕೊಳ್ಳಿ. ಅದಕ್ಕೆ ಸೈಂಧವ ಲವಣ ಸೇರಿಸಿ ನಂತರ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಕಷಾಯವನ್ನು ಕುಡಿಯುವುದರಿಂದ ಹಲವು ರೋಗಗಳಿಂದ ದೂರವಿರಬಹುದು.

ಹಾಲಿನಲ್ಲಿ ಸಿಗುವ ಕ್ಯಾಲ್ಸಿಯಂಗಿಂತ ಈ ನುಗ್ಗೆಸೊಪ್ಪಿನ ಕಷಾಯದಲ್ಲಿ 10 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇರುತ್ತದೆ. ಹಾಗೆ ಮೊಸರಿನಿಂದ ಸಿಗುವ ಪ್ರೊಟೀನ್ ಗಿಂತ 8 ಪಟ್ಟು ಹೆಚ್ಚು ಪ್ರೋಟಿನ್ಸ್ ನುಗ್ಗೆಸೊಪ್ಪಿನ ರಸವನ್ನು ಕುಡಿಯುವುದರಿಂದ ಸಿಗುತ್ತದೆ.

ಬಾಳೆ ಹಣ್ಣನ್ನು ತಿಂದಾಗ ಸಿಗುವ ಪೊಟ್ಯಾಷಿಯಂ ಗಿಂತ 15 ಪಟ್ಟು ಹೆಚ್ಚು ಪೊಟ್ಯಾಷಿಯಂ ಇದನ್ನು ಸೇವಿಸುವುದರಿಂದ ಪಡೆಯಬಹುದು.

ಅಧ್ಯಯನದ ಪ್ರಕಾರ ಈ ನುಗ್ಗೆಸೊಪ್ಪಿನ ರಸವನ್ನು ನಿರಂತರವಾಗಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಶ್ವಾಸಕೋಶ ಮತ್ತು ಯಕೃತ್ ಗೂ ಇದು ತುಂಬಾ ಒಳ್ಳೆಯದು. ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿ ಇಡುವ ಗುಣ ಈ ನುಗ್ಗೆಸೊಪ್ಪಿನ ರಸಕ್ಕಿದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...