alex Certify ಥಟ್ಟಂತ ಮಾಡಿ ಸವಿಯಿರಿ ಆರೋಗ್ಯಕರ ʼರಾಗಿ ದೋಸೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ಮಾಡಿ ಸವಿಯಿರಿ ಆರೋಗ್ಯಕರ ʼರಾಗಿ ದೋಸೆʼ

ರಾಗಿ ದೋಸೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಹಾಗೂ ಡಯೆಟ್ ಮಾಡುವವರಿಗೆ ಇದು ಒಳ್ಳೆಯದು. ಮಾಡುವುದು ಕೂಡ ಸುಲಭ.

ಬೇಕಾಗುವ ಸಾಮಾಗ್ರಿಗಳು:

1 ಕಪ್ ರಾಗಿ ಹಿಟ್ಟು, 2 ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು, 2 ಟೇಬಲ್ ಸ್ಪೂನ್ – ಚಿರೋಟಿ ರವೆ, ಅರ್ಧ ಕಪ್ – ಮೊಸರು, ಚಿಟಿಕೆ ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ.

ಮಾಡುವ ವಿಧಾನ:

ಮೊದಲಿಗೆ ಒಂದು ಬೌಲ್ ಗೆ ರಾಗಿ ಹಿಟ್ಟು, ರವೆ, ಅಕ್ಕಿ ಹಿಟ್ಟು, ಉಪ್ಪು, ಸೋಡಾ, ಮೊಸರು ಹಾಕಿ ಚೆನ್ನಾಗಿ ತಿರುಗಿಸಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸಿ. ದೋಸೆ ಹಿಟ್ಟಿನ ಹದಕ್ಕೆ ಇದನ್ನು ಕಲಸಿಕೊಳ್ಳಿ. ನಂತರ ಈ ಮಿಶ್ರಣವನ್ನು 20 ನಿಮಿಷಗಳ ಕಾಲ ನೆನೆಯಲು ಬಿಟ್ಟುಬಿಡಿ.

ನಂತರ ದೋಸೆ ಹಂಚನ್ನು ಬಿಸಿ ಮಾಡಲು ಇಡಿ. ಈ ಹಿಟ್ಟನ್ನು ಸ್ವಲ್ಪ ಹಾಕಿ ದೋಸೆ ಮಾಡಿಕೊಳ್ಳಿ. ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ರುಚಿಕರವಾದ ರಾಗಿ ದೋಸೆ ಸವಿಯಲು ಈಗ ಸಿದ್ಧವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...