ರಾಗಿ ದೋಸೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಹಾಗೂ ಡಯೆಟ್ ಮಾಡುವವರಿಗೆ ಇದು ಒಳ್ಳೆಯದು. ಮಾಡುವುದು ಕೂಡ ಸುಲಭ.
ಬೇಕಾಗುವ ಸಾಮಾಗ್ರಿಗಳು:
1 ಕಪ್ ರಾಗಿ ಹಿಟ್ಟು, 2 ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು, 2 ಟೇಬಲ್ ಸ್ಪೂನ್ – ಚಿರೋಟಿ ರವೆ, ಅರ್ಧ ಕಪ್ – ಮೊಸರು, ಚಿಟಿಕೆ ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ರಾಗಿ ಹಿಟ್ಟು, ರವೆ, ಅಕ್ಕಿ ಹಿಟ್ಟು, ಉಪ್ಪು, ಸೋಡಾ, ಮೊಸರು ಹಾಕಿ ಚೆನ್ನಾಗಿ ತಿರುಗಿಸಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸಿ. ದೋಸೆ ಹಿಟ್ಟಿನ ಹದಕ್ಕೆ ಇದನ್ನು ಕಲಸಿಕೊಳ್ಳಿ. ನಂತರ ಈ ಮಿಶ್ರಣವನ್ನು 20 ನಿಮಿಷಗಳ ಕಾಲ ನೆನೆಯಲು ಬಿಟ್ಟುಬಿಡಿ.
ನಂತರ ದೋಸೆ ಹಂಚನ್ನು ಬಿಸಿ ಮಾಡಲು ಇಡಿ. ಈ ಹಿಟ್ಟನ್ನು ಸ್ವಲ್ಪ ಹಾಕಿ ದೋಸೆ ಮಾಡಿಕೊಳ್ಳಿ. ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ರುಚಿಕರವಾದ ರಾಗಿ ದೋಸೆ ಸವಿಯಲು ಈಗ ಸಿದ್ಧವಾಗುತ್ತದೆ.