alex Certify ಥಟ್ಟಂತ ಮಾಡಿ ಬಾಳೆಹಣ್ಣಿನ ‘ರಸಾಯನ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ಮಾಡಿ ಬಾಳೆಹಣ್ಣಿನ ‘ರಸಾಯನ’

ಬಾಳೆಹಣ್ಣಿನ ರಸಾಯನ ಎಂದರೆ ಬಾಯಲ್ಲಿ ನೀರು ಬರುತ್ತದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ಮನೆಯಲ್ಲಿ ಬಾಳೆಹಣ್ಣು ಇದ್ದರೆ ಒಮ್ಮೆ ಟ್ರೈ ಮಾಡಿ. ಥಟ್ಟಂತ ಮಾಡಿಬಿಡಬಹುದು.

ಬೇಕಾಗುವ ಸಾಮಗ್ರಿಗಳು:

ಬಾಳೆಹಣ್ಣು 3, ಸಕ್ಕರೆ-1 ಟೇಬಲ್ ಸ್ಪೂನ್, ತೆಂಗಿನಕಾಯಿ ತುರಿ-1 ಟೇಬಲ್ ಸ್ಪೂನ್, ಏಲಕ್ಕಿ ಪುಡಿ-1/4 ಟೀ ಸ್ಪೂನ್, ಬೆಲ್ಲ-1/4 ಕಪ್, ಜೇನುತುಪ್ಪ-1/2 ಟೀ ಸ್ಪೂನ್, ತುಪ್ಪ-ಸ್ವಲ್ಪ.

ಮಾಡುವ ವಿಧಾನ:

ಒಂದು ಬೌಲ್ ಗೆ ಬಾಳೆಹಣ್ಣನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡು ಹಾಕಿ. ನಂತರ ಇದಕ್ಕೆ ಬೆಲ್ಲ, ಸಕ್ಕರೆ, ಏಲಕ್ಕಿ ಪುಡಿ, ತೆಂಗಿನಕಾಯಿ ತುರಿ, ಜೇನುತುಪ್ಪ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಗೋಡಂಬಿ ಹಾಗೂ ಬಾದಾಮಿ ಚೂರುಗಳನ್ನು ಕೂಡ ಸೇರಿಸಿ ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...