alex Certify ತ್ರಿವರ್ಣ ಧ್ವಜಕ್ಕೆ ಆರತಿ ಎತ್ತಿ ಪೂಜೆ ಸಲ್ಲಿಸಿದ ವೃದ್ಧೆ: ಭೇಷ್​ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ರಿವರ್ಣ ಧ್ವಜಕ್ಕೆ ಆರತಿ ಎತ್ತಿ ಪೂಜೆ ಸಲ್ಲಿಸಿದ ವೃದ್ಧೆ: ಭೇಷ್​ ಎಂದ ನೆಟ್ಟಿಗರು

75 ವರ್ಷಗಳ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಭಾರತವು ಅದ್ಧೂರಿಯಾಗಿ ಆಚರಿಸಿದೆ. ಸೋಶಿಯಲ್​ ಮೀಡಿಯಾದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಲೇ ಇದೆ. ಇದೇ ಸಾಲಿನಲ್ಲಿ ವೃದ್ಧೆಯೊಬ್ಬರು ತ್ರಿವರ್ಣ ಧ್ವಜಕ್ಕೆ ಆರತಿ ಎತ್ತಿ ಪೂಜೆ ಸಲ್ಲಿಸುತ್ತಿರುವ ದೃಶ್ಯವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಐಎಎಸ್​ ಅಧಿಕಾರಿ ಅವಿನಾಶ್​ ಶರಣ್​ ಎಂಬವರು ಈ ವಿಡಿಯೋವನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ.

ತಮ್ಮ ಮನೆಯ ಆವರಣದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದ ವೃದ್ಧೆಯು ಬಾವುಟಕ್ಕೆ ಪೂಜೆ ಸಲ್ಲಿಸುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋಗೆ ಅವಿನಾಶ್​ ಶರಣ್​ ‘ಗೌರವ’ ಎಂದು ಶೀರ್ಷಿಕೆ ನೀಡಿದ್ದಾರೆ. ಅಲ್ಲದೆ ಹರ್​ ಘರ್​ ತಿರಂಗ ಎಂಬ ಹ್ಯಾಶ್​ಟ್ಯಾಗ್​ನ್ನೂ ನೀಡಿದ್ದಾರೆ.

ಆಜಾದಿ ಕಾ ಅಮೃತ್​ ಮಹೋತ್ಸವದ ಅಂಗವಾಗಿ ದೇಶದಲ್ಲಿ 20 ಕೋಟಿಗೂ ಅಧಿಕ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಾಡಿದೆ. ಆಗಸ್ಟ್​ 13ರಿಂದ 15ರವರೆಗೆ ಕೇಂದ್ರ ಸರ್ಕಾರವು ದೇಶದಲ್ಲಿ ʼಹರ್​ ಘರ್​ ತಿರಂಗಾʼ ಆಯೋಜಿಸಿತ್ತು.

ಈ ವಿಡಿಯೋವನ್ನು ನೋಡಿದ ಟ್ವೀಟಿಗರು ತ್ರಿವರ್ಣ ಧ್ವಜದೆಡೆಗೆ ವೃದ್ಧೆಗೆ ಗೌರವ ಹಾಗೂ ಶ್ರದ್ಧೆಯನ್ನು ಕೊಂಡಾಡಿದ್ದಾರೆ.

— Awanish Sharan (@AwanishSharan) August 14, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...